ಹಿರಿಯೂರು : ತರಕಾರಿಕೊಳ್ಳಲು ಮುಗಿಬಿದ್ದ ಗ್ರಾಹಕರು

ಹಿರಿಯೂರು :

     ನಗರದಲ್ಲಿ ಹಣ್ಣು, ತರಕಾರಿ, ಸೊಪ್ಪು, ಹೂವು, ಮಾರಾಟವನ್ನು ಭಾನುವಾರದಿಂದ ನೆಹರೂ ಮಾರುಕಟ್ಟೆಯಿಂದ ನಗರದ ನೆಹರೂ ಮೈದಾನಕ್ಕೆ ಸ್ಥಳಾಂತರಿಸಿ, ನಗರಸಭೆ ವತಿಯಿಂದ ಬಾಕ್ಸ್ ಮಾರ್ಕಿಂಗ್ ಮಾಡಿದ್ದರು. ಗ್ರಾಹಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಸರ್ಕಾರದ ಯಾವುದೇ ಲಾಕ್ ಡೌನ್ ನಿಯಮಗಳನ್ನು ಪಾಲಿಸದೆ ಅಗತ್ಯ ವಸ್ತುಗಳು ಹಾಗೂ ತರಕಾರಿಗಳನ್ನು ಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದ ದೃಶ್ಯ ಕಂಡುಬಂತು.

      ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚಿರಿಕೆ ಕ್ರಮಗಳ ಬಗ್ಗೆ ಯಾವುದೇ ಗಾಂಭೀರ್ಯತೆ ಭಯ-ಭೀತಿ ಇಲ್ಲದೆ ನಗರದ ಜನರು ನೆಹರೂ ಮೈದಾನದಲ್ಲಿ ತರಕಾರಿಗಳು ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಗುಂಪು ಗುಂಪಾಗಿ ತರಕಾರಿ ಅಂಗಡಿಗಳ ಮುಂದೆ ಜಾಮಾಯಿಸಿದ್ದರು.

      ಈ ಸಂದರ್ಭದಲ್ಲಿ ನಗರದ ಸುತ್ತ-ಮುತ್ತಲ ಹಳ್ಳಿಗಳಿಂದ ತರಕಾರಿ ಬೆಳೆದ ಜನ ತಮ್ಮ ಟೆಂಪೋಗಳಲ್ಲಿ ತರಕಾರಿ ತಂದು ಮೈದಾನದ ಒಂದು ಕಡೆ ಇಳಿಸುತ್ತಿದ್ದರೆ ಮೈದಾನದ ಇನ್ನೊಂದು ಕಡೆ ಈ ತರಕಾರಿಗಳನ್ನು ಕೊಳ್ಳಲು – ಮಾರಲು ನಗರದ ತರಕಾರಿವೆಂಡರ್ ಗಳು ಹಾಗೂ ಜನರು ತಮ್ಮ ತಮ್ಮ ಸ್ಕೂಟರ್ ಹಾಗೂ ಬೈಕುಗಳಲ್ಲಿ ಮತ್ತು ಟೆಂಪೂ ಟಾಟಾಎಸಿಗಳಲ್ಲಿ ನೆಹರೂ ಮೈದಾನದಲ್ಲಿ ಯಾರ ಹಂಗೂ ಇಲ್ಲದೆ ಸುತ್ತಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ಇದೆಲ್ಲವನ್ನು ನೋಡಿಯೂ ನೋಡದಂತೆ ನಗರದ ಪೋಲೀಸರು ಅಸಹಾಯಕತೆಯಿಂದ ಕೈಕಟ್ಟಿ ನಿಂತಿದ್ದರು.

      ಈ ನೆಹರೂ ಮೈದಾನದ ಸುತ್ತ ಜನ ವಸತಿಪ್ರದೇಶವಿದ್ದು ಇಲ್ಲಿ ತರಕಾರಿ ಸಂತೆ ನಡೆಯುವದರಿಂದ ಅದನ್ನು ಕೊಳ್ಳಲು ಮಾರಲು ನೂರಾರು ಜನರು ಇಲ್ಲಿಗೆ ಬಂದು-ಹೋಗುವದರಿಂದ ಸಾಮಾಜಿಕ ಅಂತರ ಇಲ್ಲದಂತೆ ಸಾರ್ವಜನಿಕರು ವರ್ತಿಸುವುದರಿಂದ ಹಾಗೂ ಈ ತರಕಾರಿ ಸಂತೆಯಲ್ಲಿ ವಹಿವಾಟು ಸಂದರ್ಭದಲ್ಲಿ ಏಳುವ ಧೂಳು ಹಾಗೂ ಉಳಿಯುವ ತರಕಾರಿ ತ್ಯಾಜ್ಯಗಳಿಂದ ಸುತ್ತಲ ಪರಿಸರ ಸಹ ಹಾಳಾಗಿ ಸುತ್ತಲ ವಸತಿಪ್ರದೇಶಕ್ಕೆ ತೀವ್ರ ಹಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

      ನಗರದ ವಿವಿಧ ಬಡಾವಣೆಗಳಿಂದ ಪ್ರದೇಶಗಳಿಂದ ಈ ತರಕಾರಿ ಕೊಳ್ಳಲು ಇಲ್ಲಿಗೆ ಬಹಳಷ್ಟು ಜನ ಬಂದು ಹೋಗುವುದರಿಂದ ಜನ-ಜಂಗುಳಿ ನೂಕು ನುಗ್ಗಲಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗಿ ಈ ಪ್ರದೇಶದಲ್ಲಿ ಕೊರೊನಾ ವೈರಸ್ ಗಳು ಸುಲಭವಾಗಿ ಇಲ್ಲಿನ ಜನ ವಸತಿಪ್ರದೇಶಕ್ಕೆ ಹರಡುವಸಾಧ್ಯತೆಯಿದೆ ಎಂಬುದಾಗಿ ಇಲ್ಲಿನ ನಿವಾಸಿಗಳು ಭಯ-ಭೀತಿಗೊಂಡಿದ್ದಾರೆ.

     ತಾಲ್ಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ಈ ತರಕಾರಿ ಮಾರುಕಟ್ಟೆ ಸಂತೆಯನ್ನು ಬೇರೆಕಡೆಗೆ ವಸತಿರಹಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಹಾಗೂ ನಗರದಲ್ಲಿ ಎಲ್ಲಾವಾರ್ಡ್‍ಗಳಿಗೆ ತಲುಪುವಂತೆ ಈ ತರಕಾರಿ ಮಾರಾಟ ಮಾಡಲು ಸೂಕ್ತ ಪರಿಹಾರ ಕಂಡುಹಿಡಿಯಬೇಕು ಎಂಬುದಾಗಿ ಈ ವಸತಿಪ್ರದೇಶದ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap