ಕೊರೋನಾ ಸೋಂಕು : ಕೇಂದ್ರದಿಂದ 25 ಸೂಕ್ಷ್ಮ ಪ್ರದೇಶಗಳ ಘೋಷಣೆ

ಬೆಂಗಳೂರು

     ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿರುವ ದೇಶದಲ್ಲಿ ಕೊರೊನಾ ವೈರಸ್ ಸೊಂಕು ಹರಡುತ್ತಿರುವ 25 ಸೂಕ್ಷ್ಮ ಪ್ರದೇಶಗಳಲ್ಲಿ ಬೆಂಗಳೂರು ನಗರ ಮತ್ತು ಮೈಸೂರು ಸೇರಿವೆ. ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ನಗರಗಳ ಪೈಕಿ ಬೆಂಗಳೂರು ಟಾಪ್ 7ರಲ್ಲಿದ್ದು ಹೊಸ ಕೇಂದ್ರವಾಗಿ ಚಿಕ್ಕಬಳ್ಳಾಪುರ ಗುರುತಿಸಲಾಗಿದೆ.

     ಭಾರತದಲ್ಲಿ ಶೇ 80ರಷ್ಟು ಕೋವಿಡ್19 ಪ್ರಕರಣಗಳು ದಾಖಲಾಗಿರುವ 10 ರಾಜ್ಯಗಳ ಪೈಕಿ ಕರ್ನಾಟಕ ಸಹ ಇದೆ. ಕರ್ನಾಟಕದಲ್ಲಿ ಮಂಗಳವಾರದ ವರೆಗೂ ಒಟ್ಟು 102 ಸೋಂಕು ಪ್ರಕರಣಗಳು ವರದಿಯಾಗಿವೆ. ಕರ್ನಾಟಕದೊಂದಿಗೆ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಗುಜರಾತ್, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಿಂದ ದೇಶದ ಶೇ 80ರಷ್ಟು ಕೋವಿಡ್19 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಕರ್ನಾಟಕ ಇನ್ನಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.

    ಬೆಂಗಳೂರಿನಲ್ಲಿ ಸೋಂಕು ದೃಢಪಟ್ಟಿರುವ 45 ಪ್ರಕರಣಗಳು ದಾಖಲಾಗಿದ್ದು, 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವ ನಗರಗಳ ಪೈಕಿ ಏಳನೇ ಸ್ಥಾನದಲ್ಲಿದೆ. ಮಂಗಳವಾರದ ವರೆಗೂ ಏಳು ಮಂದಿ ಗುಣಮುಖರಾಗಿದ್ದಾರೆ ಹಾಗೂ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದಾರೆ. ಕಳೆದ 14 ದಿನಗಳಲ್ಲಿ ಬೆಂಗಳೂರಿನಲ್ಲಿ 23 ಪ್ರಕರಣಗಳು ದಾಖಲಾಗಿವೆ. ಇನ್ನೂ ಮೈಸೂರಿನಲ್ಲಿ 14 ಹಾಗೂ ಚಿಕ್ಕಬಳ್ಳಾಪುರದಲ್ಲಿ 9 ಪ್ರಕರಣಗಳು ವರದಿಯಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಮೈಸೂರಿನ ಔಷಧ ತಯಾರಿಸುವ ಕಂಪನಿಯ ಸಿಬ್ಬಂದಿಗಳ ಪೈಕಿ 12 ಜನರಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಅವರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link