ತುಮಕೂರು
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದ್ದರೂ, ಆ ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಸಂಚರಿಸುತ್ತಿದ್ದ ಒಟ್ಟು ಆರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಏಪ್ರಿಲ್ 7 ರಂದು ಬೆಳಗ್ಗೆ 9-30 ರಿಂದ 10 ಗಂಟೆ ನಡುವೆ ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದಲ್ಲಿ ತುಮಕೂರು-ಕುಣಿಗಲ್ ರಸ್ತೆಯಲ್ಲಿ ತುಮಕೂರು ಕಡೆಯಿಂದ ಬರುತ್ತಿದ್ದ ವಾಹನಗಳು ಪೊಲೀಸರನ್ನು ನೋಡಿ ನಿಲುಗಡೆ ಆದವಲ್ಲದೆ, ಅವುಗಳ ಚಾಲಕರು ವಾಹನಗಳನ್ನು ಅಲ್ಲೇ ನಿಲುಗಡೆ ಮಾಡಿ ಪರಾರಿಯಾಗಿದ್ದಾರೆ.
ಪಿಸ್ತಾ ಕಾರು (ಕೆಎ-44-ಎಂ-370), ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ (ಕೆಎ-02-ಇಇ-954), ಟಾಟಾ ಇಂಡಿಕಾ ಕಾರು (ಕೆಎ-01-ಎಡಿ-1121), ಟಾಟಾ ಇಂಡಿಕಾ ವಿ2 ಕಾರು (ಕೆಎ-03-ಎಸಿ-9228), ಪ್ಯಾಸೆಂಜರ್ ಆಟೋ (ಕೆಎ-06-ಎಎ-4323), ಮಾರುತಿ ಸುಜುಕಿ ಓಮ್ನಿ ಕಾರು (ಕೆಎ-44-ಎಂ-005) – ಈ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. ಕಲಂ 188 ಪ್ರಕಾರ ಮೊಕದ್ದಮೆ ದಾಖಲಾಗಿದೆ.