ಪಾವಗಡ
ತಾಲ್ಲೂಕಿನಲ್ಲಿ ಟೊಮೋಟೊ, ಬದನೆ ಕಾಯಿ ಹಾಗೂ ಕಲ್ಲಂಗಡಿ, ಕರಬೂಜ ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ರೈತರು ತೋಟಗಾರಿಕೆ ಇಲಾಖೆಯಿಂದ ಗ್ರಾಹಕರಿಗೆ ಮಾರಾಟ ಮಾಡಿಸಲು ಮುಂದಾಗಿದ್ದಾರೆ. ರೈತರು ಮಾರಾಟ ಮಾಡಲು ಎಲ್ಲ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದೆಂದು ತೋಟಗಾರಿಕೆ ಉಪ ನಿರ್ದೇಶಕ ರಘು ತಿಳಿಸಿದ್ದಾರೆ.
ಅವರು ಭಾನುವಾರ ತಾಲ್ಲೂಕು ಕಚೆರಿಯ ಮುಂದೆ ಟೊಮೊಟೊ ತುಂಬಿದ ನಾಲ್ಕು ವಾಹನಗಳನ್ನು ಮಾರುಕಟ್ಟೆಗೆ ಕಳಿಸಲು ಅನುವು ಮಾಡಿ ಮಾತನಡಿದರು. ರೈತರಿಂದ 30 ಟನ್ ಟೊಮೋಟೊವನ್ನು ರಾಮನಗರ ಮಾರುಕಟ್ಟೆಗೆ ಕಳುಹಿಸಿದ್ದು, ತಾಲ್ಲೂಕಿನಲ್ಲಿ ಟೊಮೋಟೊ ಬೆಳೆದ ರೈತರು ನಮಗೆ ಮಾಹಿತಿ ನೀಡಿದರೆ ಅವರು ಬೆಳೆದ ಟೊಮೋಟೋವನ್ನು ಮಾರುಕಟ್ಟೆಗೆ ಕಳುಹಿಸಲಾಗುವುದೆಂದರು.
ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ತೋಟಗಾರಿಕೆಯಿಂದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರಿಂದ 150 ಟನ್ ಟೊಮೋಟೊ ಬೇಡಿಕೆ ಇದೆ. ಕೆ.ಜಿಗೆ ರೂ. 4.50 ಕ್ಕೆ ಮಾರಾಟ ಮಾಡಿಸಿಕೊಡಲಾಗುವುದು. ವಿವಿಧ ಬೆಳೆಗಳನ್ನು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಮಾರಾಟ ಮಾಡಿಕೊಂಡು ಬರಲು ರೈತರಿಗೆ ಕರೆ ನೀಡಿದರು.ತಾಲ್ಲೂಕಿನ ರೈತರು ಮಂಗಳವಾರದಿಂದ ಹೆಸರು ನಮೂದಿಸಿ ಕೊಂಡು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಮುಂದಾಗಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯ ನಿರ್ದೇಶಕ ಸುಧಾಕರ್ ಹಾಗೂ ತಾಲ್ಲೂಕಿನ ರೈತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ