ಮಳೆಗಾಳಿ: ಬೆಳೆ ನಷ್ಟ, ಧರೆಗುರುಳಿದ ವಿದ್ಯುತ್ ಕಂಬಗಳು

ಹರಪನಹಳ್ಳಿ

    ಶನಿವಾರ ಮಳೆಗಾಳಿಗೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳೆ ನಾಶ, ಮೇಲ್ಚಾವಣಿ ಹಾರಿಹೋಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ವರಧಿಯಾಗಿದೆ.ತಾವರೆಗುಂದಿ ಗ್ರಾಮದ ರೈತ ಮಲ್ಕಪ್ಪ ಒಡೆತನದ 2 ಎಕರೆ ಬತ್ತ ಸಂಪೂರ್ಣ ಚಲ್ಲಾಪಿಲ್ಲಿಯಾಗಿದೆ. ಬೆಣ್ಣಿಹಳ್ಳಿ ಗ್ರಾಮದ 66 ಕೆವಿ ವಿದ್ಯುತ್ ಟವರ್ ಗಾಳಿಗೆ ವಾಲಿದ್ದು ಸಂಬಂಧಪಟ್ಟ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಕಣಿವಿಹಳ್ಳಿ ಹಾಗೂ ಗಜಾಪುರ ಸೇರಿದಂತೆ ಇತರೆ ಕಡೆಗಳಲ್ಲಿ 10 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತೆಲಿಗಿ ವ್ಯಾಪ್ತಿಯಲ್ಲಿ ಶಿವಪುರ, ರಾಗಿಮಸಲವಾಡ, ಚಿಕ್ಕಮಜ್ಜಿಗೇರಿ ಹಾಗೂ ಕಂಭತ್ತಹಳ್ಳಿ ಗ್ರಾಮಗಳಲ್ಲಿ 8 ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿವೆ.ಗಿರಿಯಾಪುರ ತಾಂಡದ ಟ್ರಾನ್ಸ್‍ಪಾರ್ಮರ್ ಸುಟ್ಟುಹೋದ ವರಧಿಯಾಗಿದೆ. ತಾಲೂಕಿನ ಚಿರಸ್ತೆಹಳ್ಳಿ ಗ್ರಾಮದ ಶಿವರಾಜ್ ಒಡೆತನದ ರೇಷ್ಮೆ ಬೆಳೆಗಾಗಿ ಹಾಕಲಾಗಿದ್ದ ಶೆಡ್‍ನ ಮೇಲ್ಚಾವಣಿ ಹಾರಿಹೋಗಿದೆ. ಪಟ್ಟಣದಲ್ಲಿ 10.6 ಮಿ.ಮೀ, ಚಿಗಟೇರಿ 12.4, ಮಿ.ಮೀ ಒಟ್ಟು 23 ಮಿಮೀ ಮಳೆಯಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link