ನವದೆಹಲಿ:
ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೆಮ್ಮದಿ, ಸಮಾಧಾನ ನೀಡುವ ಸುದ್ದಿ ನೀಡಿದೆ.ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರು ಕೆಲವು ಷರತ್ತುಗಳೊಂದಿಗೆ ರಾಜ್ಯದ ಒಳಗಿನ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ಮಾಡಿಕೊಡ ಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುನ್ಯಾ ಸಲೀಲಾ ಶ್ರೀವಾಸ್ತವ್, ಕೊರೊನಾ ಹಾವಳಿ ಹೆಚ್ಚು ಪ್ರಭಾವ ಬೀರಿರದ ಪ್ರದೇಶಗಳಲ್ಲಿ ಇಂದಿನಿಂದ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗುವುದು. ಇದರಿಂದ ಕಾರ್ಮಿಕರಿಗೆ ಉದ್ಯೋಗಾವ ಕಾಶಗಳು ದೊರೆಯಲಿವೆ ಇದು ಕೈಗಾರಿಕೆ ಮತ್ತು ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಇನ್ನು ಕಾರ್ಮಿಕರು ಲಾಕ್ ಡೌನ್ ಸಮಯದಲ್ಲಿ ಷರತ್ತುಗಳೊಂದಿಗೆ ರಾಜ್ಯದ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶವಿದೆ. ಆದರೆ ಯಾವುದೇ ಕಾರ್ಮಿಕರು ಕೂಲಿಗಾಗಿ ರಾಜ್ಯ ದ ಹೊರಗೆ ಹೋಗುವಂತಿಲ್ಲ ಎಂದೂ ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ