ಲಖನೌ:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ, ಕೊರೋನಾ ಶಂಕಿತ, ಜಮಾತಿಗಳಿಗೆ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡಲು ನಿರ್ಧರಿಸಿದೆ.
ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದಾಳಿಯ ವೇಳೆ ವಶಕ್ಕೆ ಪಡೆಯಲಾಗಿರುವ ಕೋವಿಡ್-19 ಶಂಕಿತ ತಬ್ಲಿಘಿ ಜಮಾತ್ ನ ಸದಸ್ಯರನ್ನು ಬಂಧಿಸಿಡಲು 23 ತಾತ್ಕಾಲಿಕ ಜೈಲುಗಳನ್ನು ತೆರೆಯಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಮೊರಾದಾಬಾದ್ ನ ಜೈಲಿನಲ್ಲಿರಿಸಲಾಗಿರುವ 6 ತಬ್ಲಿಘಿ ಜಮಾತ್ ನ ಸದಸ್ಯರಿಗೆ ಕೊರೋನಾ ರೋಗಲಕ್ಷಣ ಕಾಣಿಸಿಕೊಂಡಿದ್ದು, ಉಳಿದ ಖೈದಿಗಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಲು ಕೊರೋನಾ ಶಂಕಿತ, ಜಮಾತಿಗಳಿಗಾಗಿಯೇ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕಳೆದ 15 ದಿನಗಳಲ್ಲಿ ರಾಜ್ಯದ ಪೊಲೀಸರು 20 ಜಿಲ್ಲೆಗಳಾದ್ಯಂತ, ದೆಹಲಿಯಲ್ಲಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ಭಾಗಿಯಾಗಿದ್ದ ಒಟ್ಟು 3,000 ತಬ್ಲಿಘಿ ಜಮಾತ್ ಸದಸ್ಯರನ್ನು ಗುರುತಿಸಿದ್ದಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಮಾಹಿತಿ ನೀಡಿದ್ದಾರೆ.
ವಿದೇಶದಿಂದ ಆಗಮಿಸಿದ್ದ 325 ತಬ್ಲಿಘಿ ಜಮಾತ್ ನ ಸದಸ್ಯರನ್ನು ಬಂಧಿಸಲಾಗಿದ್ದು, 45 ಎಫ್ಐಆರ್ ಗಳನ್ನು ದಾಖಲಿಸಿ, ಪಾಸ್ಪೋರ್ಟ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ