ಬೆಂಗಳೂರು :
ಎರಡು ತಲೆಹಾವನ್ನ ಆಹಾರದ ಬಾಕ್ಸ್ನಲ್ಲಿಟ್ಟು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹೊಸ ಗುರಪ್ಪನಪಾಳ್ಯದ ಮಹಮ್ಮದ್ ರಿಜ್ವಾನ್ (26) ಹಾಗೂ ಅಜರ್‍ಖಾನ್ (27) ಬಂಧಿತ ಆರೋಪಿಗಳು. ಮಹಮ್ಮದ್ ರಿಜ್ವಾನ್ ಡಂಜೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಯುವಕರು, ಲಾಕ್ಡೌನ್ ನಡುವೆಯೂ ಫುಡ್ ಡೆಲಿವರಿಗೆ ಅವಕಾಶ ನೀಡಿರುವುದನ್ನು ದುರ್ಬಳಕೆ ಮಾಡಿಕೊಂಡ ಇಬ್ಬರು ಕಿರಾತಕರು, ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎರಡು ತಲೆ ಹಾವು ಮಾರಾಟಕ್ಕೆ ಇಳಿದಿದ್ದರು ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ತಲೆ ಹಾವುಗಳಿಗೆ 50 ರಿಂದ 60 ಲಕ್ಷ ಬೆಲೆ ಇದೆ ಎನ್ನಲಾಗಿದೆ.
ಸಾರಕ್ಕಿ ಸರ್ಕಲ್‍ನ ಬಸಪ್ಪ ಗಾರ್ಡನ್‍ನಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಎರಡು ತಲೆ ಹಾವನ್ನು ಇಟ್ಟುಕೊಂಡು ನಿಂತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
