ಗುವಾಹಟಿ:
ರಾಜ್ಯಾದ್ಯಂತ 1,964 ಹಂದಿಗಳು ಸಾವಿಗೀಡಾಗಿರುವ ಹಿನ್ನೆಲೆ ಬಿಜೆಪಿ ಸರ್ಕಾರ ಅಸ್ಸಾಂ ರಾಜ್ಯಾದ್ಯಂತ ಹಂದಿಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ.
ಹಂದಿಗಳ ಸಾವಿಗೆ ಕಾರಣ ಗೊತ್ತಾಗಿಲ್ಲ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್ ಮತ್ತು ಶಿವಸಾಗರ್ ಜಿಲ್ಲೆಯಲ್ಲಿ ಒಟ್ಟು 1,964 ಹಂದಿಗಳು ಸಾವನ್ನಪ್ಪಿವೆ ಎಂದು ಅಸ್ಸಾಂ ಕೃಷಿ ಸಚಿವ ಅತುಲ್ ಬೋರಾ ಮಾಹಿತಿ ನೀಡಿದ್ದು, ಹಂದಿ ಮಾಂಸ ಖರೀದಿ ಅಥವಾ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಸದ್ಯ ಪಶುವೈದ್ಯರು ಹಂದಿಗಳ ಸಾವಿಗೆ ಕಾರಣವಾದ ಕಾಯಿಲೆಯನ್ನು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಸತ್ತ ಮತ್ತು ಸೋಂಕು ಪೀಡಿತ ಹಂದಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ” ಎಂದು ಸಚಿವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








