ವಾಷಿಂಗ್ಟನ್:
ಅಮೆರಿಕಾದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಕಳೆದ 24 ಗಂಟೆಗಳಲ್ಲಿ ಸುಮಾರು 2,494 ಮಂದಿ ಬಲಿಯಾಗಿದ್ದಾರೆ. ಕೊರೋನಾ ಮಟ್ಟಹಾಕಲು ಅಮೆರಿಕಾ ಹೆಣಗಾಡುತ್ತಿದ್ದು, ಈ ವರೆಗೂ ಕೊರೋನಾ 53,511 ಮಂದಿಯನ್ನು ಬಲಿ ಪಡೆದಿದೆ. ಅಲ್ಲದೆ, 936,293 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದೆ.
ಸೋಂಕು ಹರಡದಂತೆ ತಡೆಯಲು ಸಿಂಪಡಿಸಲಾಗುವ ಸೋಂಕು ನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಅಥವೇ ನೇರಳಾತೀತ ಕಿರಣಗಳನ್ನು ಹಾಯಿಸಿದರೆ ಕೊರೋನಾ ವೈರಸ್ ಅನ್ನು ಕೊಲ್ಲಬಹುದು ಎಂದು ಟ್ರಂಪ್ ಹೇಳಿದ್ದರು. ಈ ಮಾತನ್ನೇ ನಂಬಿದ ಜನರು ನ್ಯೂಯಾರ್ಕ್ ನಲ್ಲಿ 30 ಮಂದಿ ಆ ಪ್ರಯೋಗ ಮಾಡಿದ್ದಾರೆ. ಮನೆ ಸ್ವಚ್ಛ ಮಾಡಲು ಬಳಸುವ ಸೋಂಕುನಾಶಕ ದ್ರಾವಣವನ್ನು ಚುಚ್ಚುಮದ್ದು ರೂಪದಲ್ಲಿ ದೇಹಕ್ಕೆ ತೆಗೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ. ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








