ನವದೆಹಲಿ
ದೇಶದಲ್ಲಿ ಕೊರೋನಾ ಎಗ್ಗಿಲ್ಲದೇ ಹರಡುವುದನ್ನು ತಡೆಗಟ್ಟಲು ಸರ್ಕಾರ ಪ್ರತಿ ದಿನ ನಡೆಸುವ ಕೋವಿಡ್-19 ಪರೀಕ್ಷೆಗಳನ್ನು ಗಣನೀಯವಾಗಿ ಏರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಸೋಂಕು ಹರಡದಂತೆ ತಡೆಗಟ್ಟಲು ಯಾದೃಚ್ಛಿಕ ಸಾಮೂಹಿಕ ಪರೀಕ್ಷೆ ಪ್ರಮುಖವಾದ ಅಂಶ ಎಂಬುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಪರೀಕ್ಷಾ ಕಿಟ್ ಗಳ ದಾಸ್ತಾನು ಇದ್ದರೂ ದಿನಕ್ಕೆ ಪ್ರಸ್ತುತ 40,000 ದಿಂದ 1 ಲಕ್ಷ ಪರೀಕ್ಷೆ ನಡೆಸಲು ಅಡಚಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕ್ಷಿಪ್ರ ರೀತಿಯಲ್ಲಿ ಕ್ರಮ ಕೈಗೊಂಡು ಅಡಚಣೆಯನ್ನು ನಿವಾರಿಸಬೇಕಾದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ