ತುಮಕೂರು
ಕಲಬೆರಕೆ ಹಾಲು ಹಾಕುತ್ತಿದ್ದ ನಾಲ್ಕು ಮಂದಿ ಹಾಲು ಉತ್ಪಾದಕರು ಸಿಕ್ಕಿ ಬಿದ್ದಿರುವ ಘಟನೆ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹಾಲು ಉತ್ಪಾಕರ ಸಂಘದಲ್ಲಿ ನಡೆದಿದೆ.
ಬಹಳ ದಿನಗಳಿಂದ ಈ ಸೊಸೈಟಿಯಿಂದ ಬರುವ ಹಾಲು ಕಲಬೆರಕೆಯಾಗುತ್ತಿದೆ ಎಂಬ ಅನುಮಾನಗಳು ಇದ್ದವು. ಸೊಸೈಟಿಯಿಂದ ಕೆ.ಬಿ ಕ್ರಾಸೆನಲ್ಲಿರುವ ಶೀಥಲೀಕರಣಕ್ಕೆ ಬರುವ ವೇಳೆಗೆ ಹಾಲು ಕೆಡುತ್ತಿತ್ತು. ಸಾಕಷ್ಟು ದುರುಗಳು ಸಹ ಇದ್ದವು. ಅನುಮಾನಗೊಂದ ಹಾಲು ಒಕ್ಕೂಟದ ಅಧಿಕಾರಿಗಳ ತಂಡ ಸೋಮವಾರ ಧಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಹಾಲಿಗೆ ಇತರೆ ಮಿಶ್ರಣ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಅಲ್ಲಿನ ಹಾಲು ಸೊಸೈಟಿಗೆ ನಾಲ್ಕೈದು ಮಂದಿ ಈ ರೀತಿ ಕಲಬೆರಕೆ ಮಾಡುತ್ತಾ ಬಂದಿದ್ದಾರೆ. ಹಾಲಿಗೆ ನೀರು ಹಾಕುವುದು, ಸಕ್ಕರೆ ಹಾಕುವುದು ಒಂದು ಕಡೆಯಾದರೆ ಹಾಲಿನ ಪೌಡರ್ ಮಿಶ್ರಣ ಮಾಡಿ ಕಲಬೆರಕೆ ಮಾಡುತ್ತಿದ್ದ ಸಂಗತಿಯೂ ಬೆಳಕಿಗೆ ಬಂದಿದೆ. ಹಸುವಿನ ಹಾಲು 3 ತಿಂಗಳ ನಂತರ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ವರ್ಷಪೂರ್ತೀ ಒಂದು ಹಸು ಅಷ್ಟೇ ನಿಗದಿತವಾಗಿ ಹಾಲು ಕೊಡುತ್ತದೆಂದರೆ ಎಂತಹವರಿಗೂ ಅನುಮಾನ ಬರುವುದು ಸಹಜ. ಇಲ್ಲಿ ಹಾಲು ಮಿಶ್ರಣ ವಾಗುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ 4 ಮಂದಿ ಉತ್ಪಾದಕರು ಸಿಕ್ಕಿ ಬಿದ್ದಿದ್ದಾರೆ.
ಕಲಬೆರಕೆ ಆರೋಪಕ್ಕೆ ಒಳಗಾಗಿರುವ ಉತ್ಪಾದಕರಿಂದ 15 ದಿನಗಳ ಬಟವಾಡೆಯನ್ನು ಮುಟ್ಟುಗೋಲು ಹಾಕಿಕೊಳಳುವುದರ ಜೊತೆಗೆ ಇನ್ನು ಮುಂದೆ ಅವರ ಹಾಲನ್ಮು ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಲು ಕಲಬೆರಕೆ ಮಾಡುವುದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಕ್ರಮ ಜರುಗಿಸುವುದರ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ