ಮಂಗಳೂರು
ನಗರದ ಸೀಲ್ ಡೌನ್ ಗೆ ಒಳಗಾಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಾಯಿ ಹಾಗೂ ಆಕೆಯ ಆರೈಕೆ ಮಾಡಿದ ಮಗನಲ್ಲೂ ಕೊರೊನಾ ಸೋಂಕು ಇಂದು ದೃಢವಾಗಿದ್ದು, ಈ ಹಿನ್ನಲೆಯಲ್ಲಿ ಇವರು ನೆಲೆಸಿರುವ ಶಕ್ತಿನಗರ ಮುಗ್ರೋಡಿ ಏರಿಯಾ ಸೀಲ್ ಡೌನ್ ಮಾಡಲಾಗಿದೆ. 80 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪುತ್ರನಲ್ಲಿ ಸೋಂಕು ದೃಢವಾಗಿತ್ತು , ಇವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ದೃಢವಾದ ಬಂಟ್ವಾಳದ ಮೃತ ಮಹಿಳೆಯ ಚಿಕಿತ್ಸೆ ಪಡೆಯುತ್ತಿದ್ದ ಪಕ್ಕದ ಕೊಠಡಿಯಲ್ಲಿ ಈ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದರು
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಆಯಾ ಆಯಿ ಕೆಲಸ ಮಾಡುತ್ತಿದ್ದ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಲ್ಲಿ ಭಾನುವಾರ ವಷ್ಟೇ ಕೊರೊನಾ ದೃಢವಾದ ಹಿನ್ನಲೆಯಲ್ಲಿ ನಾಯಿಲ ಪ್ರದೇಶ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಶಕ್ತಿನಗರದ ಮುಗ್ರೋಡಿ ಸೀಲ್ ಡೌನ್ ಮಾಡಲಾಗಿದ್ದು ಸುತ್ತಮುತ್ತದ 7 ಕಿ.ಮಿ ವ್ಯಾಪ್ತಿಯೂ ಈ ಹಿನ್ನಲೆಯಲ್ಲಿ ಬಫರ್ ಝೋನ್ ಗೆ ಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








