ಅನ್ನ ದಾಸೋಹ ಶ್ಲಾಘನೀಯವಾದುದು

ಗುಬ್ಬಿ

     ಸಂಘ ಸಂಸ್ಥೆಗಳು ಮತ್ತು ದಾನಿಗಳು ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವ ಮೂಲಕ ಅನ್ನ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದಾಗಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ತಿಳಿಸಿದರು. ಅವರು ಮಂಗಳವಾರ ಪಟ್ಟಣದಲ್ಲಿ ಅಸಹಾಯಕರಿಗೆ ಊಟದ ಪೊಟ್ಟಣ ವಿತರಿಸಿ ಮಾತನಾಡುತ್ತಿದ್ದರು.

     ದಾಸೋಹ ವ್ಯವಸ್ಥೆ ಮಾಡಿರುವ ಅ.ನಾ.ಲಿಂಗಪ್ಪ ಮಾತನಾಡಿ, ವಲಸೆ ಕುಟುಂಬಗಳು ಮಹಾಮಾರಿ ಕೊರೋನ ಸೋಂಕಿನಿಂದಾಗಿ ತಮ್ಮ ಊರಿಗೆ ಹೋಗಲು ಸಾಧ್ಯವಾಗದೆ ಇಲ್ಲೇ ಉಳಿಯುವಂತೆ ಆಗಿದೆ. ಈ ಮಹಾಮಾರಿಯು ದಿನನಿತ್ಯದ ಕೂಲಿ ಕಾರ್ಮಿಕರ ಅನ್ನವನ್ನು ಕಿತ್ತುಕೊಂಡಿರುವುದು ವಿಪರ್ಯಾಸದ ಸಂಗತಿ ಎಂದರು. ದಿನನಿತ್ಯ ನಿರಾಶ್ರಿತ ಕುಟುಂಬಗಳಿಗೆ ಆಹಾರ ಸಿದ್ದಪಡಿಸಿ, ವಿತರಿಸಲು ಸ್ವಯಂ ಸೇವಕರಾಗಿ ಜಿ.ಎನ್.ಅಣ್ಣಪ್ಪಸ್ವಾಮಿ, ಕೆಂಪರಾಜು, ಎಸ್.ನಂಜೇಗೌಡ, ಹೇಮಂತ್, ವಂಶಿ ನಾಗರಾಜು, ತೋಂಟಾರಾಧ್ಯ, ಎಚ್.ಎಲ್.ಬಸವರಾಜ್, ಭೀಮಸೇನ್ ಶೆಟ್ಟಿ ಮುಂತಾದವರು ದುಡಿಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link