ಹಂದಿಗಳನ್ನು ಪಟ್ಟಣದಿಂದ ಹೊರಹಾಕಿ,  

ಚಿಕ್ಕನಾಯಕನಹಳ್ಳಿ :
      ಪಟ್ಟಣದ 1ನೇ ವಾರ್ಡ್ ನಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ, ಹಂದಿಗಳು ಕೊಳಚೆ ಪ್ರದೇಶದಲ್ಲಿ ಒದ್ದಾಡಿ ವಾರ್ಡ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ, ಕೊರೋನಾ ವೈರಸ್ ಭಯದಲ್ಲಿರುವ ವಾರ್ಡ್ ಜನತೆ, ವಾರ್ಡ್ ನಲ್ಲಿ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿದ್ದಾರೆ.
      ಸರ್ಕಾರಿ ಪಿಯುಸಿ ಕಾಲೇಜಿನ ಹಿಂಭಾಗದ ಹಾಸ್ಟಲ್ ಬಳಿ ಕೊಳಚೆ ಪ್ರದೇಶ ನಿರ್ಮಾಣವಾಗಿ ಹಂದಿಗಳ ವಾಸಸ್ಥಾನವಾಗಿದೆ, ಇದರಿಂದ ಈ ಭಾಗದಲ್ಲಿ ಅನೈರ್ಮಲ್ಯ ಹೆಚ್ಚಾಗುತ್ತಿದೆ, ವಾರ್ಡ್ ನಲ್ಲಿ ಖಾಲಿ ನಿವೇಶನವಿರುವ ಜಾಗದಲ್ಲಿ ಗಿಡಗಂಟೆಗಳು ಬೆಳೆದು ಹಂದಿಗಳ ತಾಣವಾಗುತ್ತಿದೆ, ಈ ಭಾಗದ ಸುತ್ತಮುತ್ತಲಿನ ಕಸವು ಅಲ್ಲಲ್ಲೇ ಶೇಖರಣೆಯಾಗಿ ರೋಗ ರುಜುನುಗಳು ಆರಂಭವಾಗಲಿವೆ ಎಂದು ವಾರ್ಡ್ ನ ನಾಗರೀಕರು ಆರೋಪಿಸಿದ್ದಾರೆ.
     ವಾರ್ಡ್ ನಲ್ಲಿ ಕಸದ ಸಮಸ್ಯೆ, ಹಂದಿಗಳ ವಾಸಸ್ಥಾನ, ಕೊಳಚೆ ನಿರ್ಮಾಣವಾಗಿರುವ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಅಧಿಕಾರಿಯೂ ಇದುವರೆವಿಗೂ ಇತ್ತ ಗಮನ ಹರಿಸಿಲ್ಲ, ಪುರಸಭಾ ಅಧಿಕಾರಿಗಳು ವಾರ್ಡ್ ನಲ್ಲಿ ನೈರ್ಮಲ್ಯ ಕಾಪಾಡುವಂತೆ ಹಾಗೂ ಕೊಳಚೆ ನಿರ್ಮಾಣದಿಂದ ಉಂಟಾಗಿರುವ ವೈರಸ್ ಗಳ ಭಯವನ್ನು ಹೋಗಲಾಡಿಸಬೇಕಾಗಿದೆ ಎಂದು ಪುರಸಭಾ ಸದಸ್ಯರಾದ ಪೂರ್ಣಿಮ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap