ಭೋಪಾಲ್
ಮಧ್ಯಪ್ರದೇಶದ ಉಜ್ಜೈನಿಯ ಬೇಹರಾಪುರ್ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನ ಗಡಿಯಾದ ಜೈಸ್ಲಮೆರ್‌ನಿಂದ ತಮ್ಮ ಗ್ರಾಮಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಬೆಳಗಾದ ಮೇಲೆ ಗ್ರಾಮಕ್ಕೆ ಹೋಗುವ ಆಲೋಚನೆಯಲ್ಲಿ ರಸ್ತೆ ಪಕ್ಕ ಮಲಗಿದ್ದರು, ಇದೇ ಸಮಯ ಕ್ಕೆ ವೇಗವಾಗಿ ಬಂದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ಮಲಗಿದ್ದವರ ಮೇಲೆ ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜೈಸ್ಲಮರ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೂವರು ಲಾಕ್ ಡೌನ್ ಪರಿಣಾಮ ಅಲ್ಲಿಂದ ವಾಪಸ್ ಆಗಿದ್ದರು. 820 ಕಿ. ಮೀ. ಸಂಚಾರ ನಡೆಸಿ ಸೋಮವಾರ ಸಂಜೆ ವೇಳೆಗೆ ಅವರು ಬೇಹರಾಪುರ್ ಗ್ರಾಮ ತಲುಪಿದ್ದರು. ಆದರೆ, ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶ ನೀಡಿರಲಿಲ್ಲ ಅದಕ್ಕಾಗಿ ಎಲ್ಲರೂ ಕೋವಿಡ್ – 19 ಪರೀಕ್ಷೆ ಮಾಡಿಸಿಕೊಂಡ ಬಳಿಕ ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
