ಕೊರೊನಾಗೆ : 20 ದಿನದ ಹಸುಗೂಸು ಬಲಿ

ಜೈಪುರ​​: 

    ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 20 ದಿನದ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.   ಜೈಪುರ್​ದ ಜಿ.ಕೆ. ಲೂನ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ದಿನದ ಮಗು ಸಾವನ್ನಪ್ಪಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.  ಕೊರೊನಾ ವೈರಸ್ ನಿಂದ  ಸಾವನ್ನಪ್ಪಿರುವ ಅತಿ ಸಣ್ಣ ವಯಸ್ಸಿನ ಮಗು ಇದು ಎಂದು ತಿಳಿಸಿದ್ದಾರೆ.

    ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಈ ಶಿಶುವನ್ನು ಮೇ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಕೊರೊನಾ ಪರೀಕ್ಷಾ ವರದಿ ಇದೀಗ ಬಂದಿದ್ದು, ವೈರಸ್​ನಿಂದಾಗಿ ಸಾವನ್ನಪ್ಪಿರುವುದು ಖಚಿತಗೊಂಡಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link