ಪ್ಯೊಂಗ್ಯಾಂಗ್:
ಕಳೆದ ಕೆಲ ದಿನಗಳಿಂದ ಅಜ್ಞಾತದಲ್ಲಿದ್ದು ಹಲವು ಊಹಾ ಪೋಹಗಳಿಗೆ ಕಾರಣವಾಗಿದ್ದ ಉತ್ತರ ಕೊರಿಯಾ ನಿರಂಕುಶ ಸರ್ವಾಧಿಕಾರಿ ಎಂದೇ ಹೆಸರು ಪಡೆದಿದ್ದ ಕಿಮ್ ಜಾಂಗ್ ಉನ್ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.ಶುಕ್ರವಾರ ನಡೆದ ಕೆಮಿಕಲ್ ಕಾರ್ಖಾನೆ ಉದ್ಘಾಟನೆಯಲ್ಲಿ ಕಿಮ್ ಜಾಂಗ್ ಭಾಗವಹಿಸಿದ್ದರು ಎಂದು ಉ.ಕೋರಿಯಾ ವರದಿ ಮಾಡಿದೆ.
ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಸುಂಜಾನ್ ಫೋಸ್ಪೇಟಿಕ್ ಫರ್ಟಿಲೈಸರ್ ಎಂಬ ಕಾರ್ಖಾನೆಯ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಕಿಮ್ ಪಾಲ್ಗೋಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಆಗಮಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ತಮ್ಮ ಸರ್ವೋಚ್ಚ ನಾಯಕನನ್ನು ನೋಡಿ ಅಲ್ಲಿ ಭಾಗವಹಿಸಿದವರೆಲ್ಲಾ ಹುರ್ರೇ ಎಂದು ಘೋಷಣೆ ಕೂಗಿದರು ಎಂದು ಕೆಸಿಎನ್ ಎ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








