ವಾಷಿಂಗ್ಟನ್:
ವಿಶ್ವದಲ್ಲಿ ತನ್ನ ರುದ್ರ ನರ್ತನ ಮುಂದುವರೆಸಿರುವ ಕೊರೋನಾ ವೈರಸ್ ಗೆ ಅಮೆರಿಕಾ ಅಕ್ಷರಶಃ ಕಂಗಾಲಾಗಿದ್ದು ಕಳೆದ 24 ಗಂಟೆಗಳಲ್ಲಿ 1,435 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ಅಮೆರಿಕಾದಲ್ಲಿ ಈವರೆಗೂ 67,046 ಹೆಚ್ಚು ಮಂದಿ ಮೃತಪಟ್ಟಿದ್ದು, 1.16 ಲಕ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ ಅತೀ ಹೆಚ್ಚು ಸೋಂಕಿಗೆ ಒಳಗಾದ ದೇಶ ಎಂಬ ಕುಖ್ಯಾತಿಗೆ ಅಮೆರಿಕಾ ಪಾತ್ರವಾದಂತಾಗಿದೆ.ಈ ನಡುವೆ ಹೇಳಿಕೆ ನೀಡಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸೋಂಕು ಹರಡಲು ಕಾರಣರಾದವರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಮತ್ತೊಮ್ಮೆ ಹರಿಹಾಯ್ದಿದ್ದಾರೆ.