ವಾಷಿಂಗ್ಟನ್:

“ಲಸಿಕೆಯೇ ಇಲ್ಲದೆ ಕೊರೊನಾ ವೈರಸ್ ನಾಶವಾಗುತ್ತದೆ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸಮರೋಪಾದಿಯಲ್ಲಿ ಔಷಧಿ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಅಮೆರಿಕ ಹಾಗೂ ಚೀನಾ ನಡುವೆ ನಿಕಟ ಪೈಪೋಟಿ ನಡೆಯುತ್ತಿದೆ.
ಈ ಮಧ್ಯೆ ಆಸಕ್ತಿದಾಯಕ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಈಗಾಗಲೇ ವೈರಸ್ ಹರಡುವಿಕೆ ತಗ್ಗುತ್ತಿದೆ. ಮುಂಬರುವ ದಿನದಲ್ಲಿ ಇನ್ನಷ್ಟು ಕಡಿಮೆಯಾಗಲಿದೆ.ಈ ಹಿಂದೆ ಸಹ ಅನೇಕ ವೈರಸ್ ಗಳು ಬಂದಿದ್ದವು. ಅವೌಗಳಿಗೆ ಲಸಿಕೆ ಕಂಡು ಹಿಡಿಯುವ ಮುನ್ನ ಅವು ಇಲ್ಲವಾಗಿದೆಈಗ ಬಂದಿರುವ ಕೋವಿಡ್-19 ಸಹ ಕೆಲ ದಿನಗಳ ನಂತರ ಇಲ್ಲವಾಗುತ್ತದೆ” ಟ್ರಂಪ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








