ಶಿರಾ:
ಇಲ್ಲಿನ ನಗರಸಭೆಯಿಂದ ಶೇ. 30 ರಷ್ಟು ಆಸ್ತಿ ತೆರಿಗೆ ವಸೂಲು ಮಾಡುತ್ತಿದ್ದು, ಇದರಿಂದ ಕೊರೋನಾ ಸಂಕಷ್ಟದಲ್ಲಿರುವ ಸಾರ್ವಜನಿಕರ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಿರಾ ತಾಲ್ಲೂಕು ಅತ್ಯಂತ ಬರಪೀಡಿತ ಪ್ರದೇಶ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಗರದಲ್ಲಿ ಅನೇಕ ಮಂದಿ ಬಡತನದಲ್ಲೂ ಮನೆಗಳನ್ನು ಕಟ್ಟಿಕೊಂಡಿದ್ದು, ಮನೆ ಕಂದಾಯದಿಂದ ಹಿಡಿದು ಪ್ರತಿಯೊಂದು ಆಸ್ತಿಯ ಮೇಲೂ ನಗರಸಭೆಯು ಹೆಚ್ಚುವರಿಗೆ ತೆರಿಗೆ ವಿಧಿಸಿ ಹೊರೆ ಮಾಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳೆದ ವರ್ಷ ಶೇ. 15ರಷ್ಟಿದ್ದ ಆಸ್ತಿ ತೆರಿಗೆಯನ್ನು ಈ ವರ್ಷ ಶೇ. 30 ಕ್ಕೆ ಏರಿಕೆ ಮಾಡುವ ಮೂಲಕ ಕೋವಿಡ್-ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರನ್ನು ನಗರಸಭೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ವಿವಿಧ ರೀತಿಯ ತೆರಿಗೆ ವಸೂಲಾತಿ ಇದ್ದು, ಶಿರಾ ನಗರಸಭೆ ಮಾತ್ರ ಮನಸೋ ಇಚ್ಛೆ ಆಸ್ತಿ ತೆರಿಗೆ ಹೆಚ್ಚಿಸಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೆ ಆಸ್ತಿ ತೆರಿಗೆ ಇಳಿಕೆ ಮಾಡುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ