ಮೈಸೂರು:

ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ, ಇತ್ತೀಚಿಗೆ ಕೊರೊನಾ ಮುಕ್ತವಾಗಿದ್ದ ಮೈಸೂರಿನಲ್ಲಿ ಇನ್ನೊಂದು ಸೋಂಕು ಪ್ರಕರಣ ಪತ್ತೆಯಾಗಿದೆ.
ಮುಂಬೈನಿಂದ ಮೈಸೂರಿ ಗೆ ಪ್ರವಾಸ ಮಾಡಿರುವ ಇತಿಹಾಸ ಹೊಂದಿರುವ ವ್ಯಕ್ತಿಯಲ್ಲಿ ಪಿ-1225 ಇಂದು ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂ ದ ಕೊಡಗಿ ಗೆ ಬಂದಿರುವ 45 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಇದರಿಂದ ಜನರಲ್ಲಿ ಮತ್ತೆ ಕೊರೊನಾ ಭೀತಿ ಎದುರಾಗಿದೆ.
ಸರ್ಕಾರವು ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಕೊರೊನಾ ಸೋಂಕು ಹರಡುತ್ತಿದೆ ಎಂದು ಹೇಳಲಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕಠಿಣ ಕ್ರಮಗಳಿಂದ ಕಡಿಮೆ ಆಗಿದ್ದ ಕೊರೊನಾ ವೈರಸ್ ಸೋಂಕು ಇಂದು ಮತ್ತೆ ತನ್ನ ಆರ್ಭಟ ತೋರಿಸಲು ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








