ತುಮಕೂರು : 55 ದಿನಗಳ ನಂತರ ರಸ್ತೆಗಿಳಿದ KSRTC ಬಸ್..!

ತುಮಕೂರು :

      ಜಿಲ್ಲಾ ಕೇಂದ್ರದಿಂದ ತಾಲ್ಲೂಕುಗಳಿಗೆ ಸಂಚಾರ ಮಾಡುವ ಬಸ್ ಗಳನ್ನು ತುಮಕೂರು ನಗರದ ಬಸ್ ನಿಲ್ದಾಣದಿಂದ ಬಿಡಲಾಯಿತಾದರೂ ನಗರ ಸಂಚಾರಕ್ಕೆಂದು ನಿಗದಿಯಾಗಿದ್ದರೂ ಜನರ ನಿರಾಸಕ್ತಿಯಿಂದ ನಗರ ಸಾರಿಗೆ ಸಂಚಾರವು ವಿರಳವಾಗಿತ್ತು. ಕರೋನಾದಿಂದ ಲಾಕ್ ಡೌನ್ ನಿಂದ 55 ದಿನಗಳ ಕಾಲ ಕೆ ಎಸ್ ಆರ್ ಟಿ ಸಿ ಹಾಗು ನಗರ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿರಲಿಲ್ಲ. 

       ತುಮಕೂರು ಬಸ್ ನಿಲ್ದಾಣದಿಂದ ಬೆಂಗಳೂರಿಗೆ ನಾನ್ ಸ್ಟಾಪ್, ದಾವಣಗೆರೆ, ಸಿರಾ, ತಿಪಟೂರು, ಅರಸೀಕೆರೆ, ಮೈಸೂರು ಸೇರಿದಂತೆ ಹಲವು ಭಾಗಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಷ್ಟು ಜನರು ಬರುತ್ತಾರೋ ಅದಕ್ಕೆ ಅನುಗುಣವಾಗಿ ಬಸ್ ಗಳನ್ನು ಕಳುಹಿಸಲಾಗುತ್ತಿದೆ. ಒಂದು ಬಸ್ ನಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 20 ರಿಂದ 25 ಜನರಿದ್ದರೂ ಬಸ್ ರಸ್ತೆಗೆ ಇಳಿಯುತ್ತಿದೆ.

    ಇನ್ನೂ ತುಮಕೂರು ನಗರ ಸಾರಿಗೆಯನ್ನು ಆರಂಭಿಸಲು ಯಾವುದೇ ಪ್ರಯಾಣಿಕರು ಮುಂದೆ ಬಂದಿಲ್ಲ, ಇದಕ್ಕೆ ಕೂಡ ಬಸ್ ವ್ಯವಸ್ತೆ ಮಾಡಲಾಗಿದ್ದು, ಹೆಚ್ಚಿನ ಪ್ರಯಾಣಿಕರು ಅಪೇಕ್ಷೆ ಪಟ್ಟರೆ ನಗರದ ಸಾರಿಗೆ ಬಸ್ ಗಳು ಕೂಡ ರಸ್ತೆಗೆ ಇಳಿಯಲಿವೆ ಎಂದು ತುಮಕೂರು ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

     ಇನ್ನೂ ಗುಬ್ಬಿ ತಾಲೂಕಿನಲ್ಲಿ ಲಾಕ್ ಡೊನ್ ಸಡಿಲಗೊಳಿಸಿ ಸಾರ್ವಜನಿಕರು ಪ್ರಯಾಣ ಮಾಡಲು ಅವಕಾಶವನ್ನು ರಾಜ್ಯ ಸರ್ಕಾರವು ಕಲ್ಪಿಸಿದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ಪ್ರಯಾಣಿಕರು ತವಕದಿಂದ ಕಾಯುತ್ತಿದ್ದ ದೃಶ್ಯ ಗುಬ್ಬಿ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದಲ್ಲಿ ಕಂಡು ಬಂದಿತ್ತು. ಗುಬ್ಬಿ ಪಟ್ಟಣದಿಂದ ತುಮಕೂರು, ಬೆಂಗಳೂರು ಸೇರಿದಂತೆ ಪ್ರಮುಖ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗಿಂತ ಗುಬ್ಬಿ ಪಟ್ಟಣದ ಮಂದಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸ್ ನಲ್ಲಿ ಪ್ರಯಾಣ ಮಾಡುವುದಕ್ಕೆ ಆಗಮಿಸಿದ್ದು ಕಂಡುಬಂದಿದೆ.

    ಬಸ್ ನಿಲ್ದಾಣದಲ್ಲಿ, ಆರಂಭಿಕ ಪರೀಕ್ಷೆಗಳನ್ನು ನಡೆಸಿ ನೊಂದಣಿ ಮಾಡಿಸಿಕೊಂಡು ಸ್ಯಾನಿಟೈಸರ್ ಬಳಸುವಂತೆ ಸೂಚಿಸಿ ನಂತರ ಬಸ್ ಒಳಗೆ ಹೋಗಿ ಕುಳಿತುಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಇನ್ನೂ ಬಸ್ ನಲ್ಲಿ ಒಂದು ಮೂರು ಸೀಟುಗಲ್ಲಿ ಇಬ್ಬರು ಹಾಗೂ ಎರಡು ಸೀಟಿನಲ್ಲಿ ಒಬ್ಬರು ಕುಳಿತುಕೊಳ್ಳುವಂತೆ ತಿಳಿಸಲಾಗಿದೆ. ಇನ್ನೂ ಮಧುಗಿರಿ ಜಿಲ್ಲೆಯಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ರಸ್ತೆಗೆ ಇಳಿಸಿದ್ದು, ಶಿರಾ, ತುಮಕೂರು, ಬೆಂಗಳೂರು ಸೇರಿದಂತೆ ಕೆಲವು ಸ್ಥಳಗಳಿಗೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

    ಬಸ್ ಹೊರಡುವುದಕ್ಕೆ ಸಮಯ ನಿಗದಿ ಮಾಡದೆ 30 ಜನರಿಗೆ ಅವಕಾಶವನ್ನು ನೀಡಿ ಬಸ್ ಚಲಾಯಿಸುವ ನಿರ್ಧಾರವನ್ನು ಮಾಡಲಾಗಿದೆ. ಬಸ್ ನಿಲ್ದಾಣದ ಒಳಗೆ ಬರುವ ಜನರನ್ನು ತಪಾಸಣೆ ಮಾಡಿ ಸ್ಯಾನಿಟೈಸರ್ ನೀಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿ ಕಳುಹಿಸಲಾಗುತ್ತದೆ.ರಾಜ್ಯ ರಸ್ತೆ ಸಾರಿಗೆಯ ಬಸ್ ಗಳಂತೂ ರಸ್ತೆಗೆ ಇಳಿದದ್ದು ಆಗಿದೆ, ಆದರೆ ಪ್ರಯಾಣಿಕರು ಬಸ್ ಹತ್ತುವುದಕ್ಕೆ ಹಿಂದೆಟು ಹಾಕುತ್ತಿರುವುದು ಕೆಲವು ಕಡೆ ಕಂಡುಬಂದಿದೆ. ದೂರದ ತಮ್ಮ ಊರುಗಳಿಗೆ ಹೋಗಬೇಕದಾವರು ಮಾತ್ರ ಬಸ್ ಗಳನ್ನು ಹತ್ತುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link