ವಾಷಿಂಗ್ಟನ್:
ಮಾಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಅಮೆರಿಕದಲ್ಲಿ ಅದಾಗಲೇ 96 ಸಾವಿರ ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 16 ಲಕ್ಷ ದಾಟಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಲಾಕ್ ಡೌನ್ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ದೇಶದಲ್ಲಿ ಒಂದೊಮ್ಮೆ ಕೊರೋನಾ ವೈರಸ್ ಹಾವಳಿಯ ಎರಡನೇ ಹಂತ ಎದುರಾದರೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ನಿರ್ಬಂಧಗಳನ್ನು ಜಾರೊಗೊಳಿಸುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎರಡನೇ ಹಂತ ಎದುರಾಗುವುದು ವಿಭಿನ್ನ ಸಾಧ್ಯತೆ ಎಂದು ಜನರು ಹೇಳುತ್ತಿದ್ದಾರೆ. ಇದು ಪ್ರಮಾಣಿತವಾಗಿದೆ. ನಾವು ಬೆಂಕಿಯನ್ನು ನಂದಿಸಲಿದ್ದೇವೆ. ಆದರೆ, ದೇಶವನ್ನು ಮುಚ್ಚಲು ಹೋಗುವುದಿಲ್ಲ ಎಂದು ಟ್ರಂಪ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಚಿಗನ್ ರಾಜ್ಯದ ಫೋರ್ಡ್ ಉತ್ಪಾದನಾ ಘಟಕದ ಪ್ರವಾಸದ ಸಮಯದಲ್ಲಿ ಮಾಧ್ಯಮ ಪ್ರಶ್ನೆಗಳಿಗೆ ಈ ಉತ್ತರ ನೀಡಿದ್ದಾರೆ.