ನವದೆಹಲಿ :
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ICSE 10 ನೇ ತರಗತಿ ಮತ್ತು ISC 12ನೇ ತರಗತಿಯ ಉಳಿಕೆ ವಿಷಯಗಳ ಪರೀಕ್ಷೆಗಳನ್ನು ಇದೇ ಜುಲೈ 1ರಿಂದ 14ರವರೆಗೆ ನಡೆಸಲು ಕೇಂದ್ರಿಯ ಮಂಡಳಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
10ನೇ ತರಗತಿ ಪರೀಕ್ಷೆ ವೇಳಾಪಟ್ಟಿ:
-ಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್‌ಸಿಜಿ ಎರಡನೇ ಪೇಪರ್, ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್ ಪೇಪರ್ 4(ಅಪ್ಲೈಡ್ ಆರ್ಟ್) , ಜುಲೈ 6ರ ಬೆಳಗ್ಗೆ 11ಕ್ಕೆ ಗ್ರೂಪ್ 3 ಎಲೆಕ್ಟಿವ್ ( ಕರ್ನಾಟಕ ಸಂಗೀತ,ಕಮರ್ಷಿಯಲ್ ಅಪ್ಲಿಕೇಷನ್ಸ್, ಕಂಪ್ಯೂಟರ್ ಅಪ್ಲಿಕೇಷನ್ಸ್, ಕುಕರಿ, ನಾಟಕ, ಎಕನಾಮಿಕ್ಸ್ ಅಪ್ಲಿಕೇಷನ್ಸ್, ಎನ್ವಿರಾನ್‌ಮೆಂಟಲ್ ಅಪ್ಲಿಕೇಷನ್ಸ್, ಫ್ಯಾಶನ್ ಡಿಸೈನಿಂಗ್ , ಫ್ರೆಂಚ್, ಜರ್ಮನ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹೋ ಸೈನ್ಸ್, ಇಂಡಿಯನ್ ಡ್ಯಾನ್ಸ್, ಮಾಸ್ ಮೀಡಿಯಾ ಕಮ್ಯುನಿಕೇಷನ್ಸ್, ಫಿಜಿಕಲ್ ಎಜುಕೇಷನ್, ವೆಸ್ಟರ್ನ್ ಮ್ಯೂಸಿಕ್, ಯೋಗ, ಟೆಕ್ನಿಕಲ್ ಡ್ರಾಯಿಂಗ್ ಅಪ್ಲಿಕೇಷನ್ಸ್), ಜುಲೈ 8 ರಂದು ಬೆಳಗ್ಗೆ 11 ಕ್ಕೆ ಹಿಂದಿ , ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್ , ಜುಲೈ 12ರ ಬೆಳಗ್ಗೆ 11ಕ್ಕೆ ಎಕನಾಮಿಕ್ಸ್(ಗ್ರೂಪ್ 2 ಎಲೆಕ್ಟೀವ್)
12ನೇ ತರಗತಿ ವೇಳಾಪಟ್ಟಿ:
ಜುಲೈ 1 ರಂದು ಬೆಳಗ್ಗೆ 11ಕ್ಕೆ ಜೀವಶಾಸ್ತ್ರ(1ನೇ ಪೇಪರ್), ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್ ಸ್ಟಡೀಸ್, ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರ, ಜುಲೈ 7 ರಂದು ಬೆಳಗ್ಗೆ 11ಕ್ಕೆ ಮನಃಶಾಸ್ತ್ರದಲ್ಲಿ, ಜುಲೈ 9 ರಂದು ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರ , ಜುಲೈ 11 ರಂದು ಬೆಳಗ್ಗೆ 11ಕ್ಕೆ ಹೋಂ ಸೈನ್ಸ್(1ನೇ ಪೇಪರ್) , ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್ , ಜುಲೈ 14 ರಂದು ಬೆಳಗ್ಗೆ 11ಕ್ಕೆ ಆರ್ಟ್5-ಕ್ರಾಫ್ಟ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ