ಬೈಕ್ ಗಳ ಮುಖಾಮುಖಿ ಡಿಕ್ಕಿ:1 ಸಾವು

ಹರಿಹರ:

     ಬೈಕ್ ಸವಾರರಿಬ್ಬರು ಮುಖಾ ಮುಖಿ ಡಿಕ್ಕಿ ಸ್ಥಳದಲ್ಲೆ ಒರ್ವ ಬೈಕ್ ಸಾವರನ್ನು ಸಾವನ್ನಪ್ಪಿದ್ದು ಇನ್ನೂಬ್ಬನ ಸ್ಥಿತಿ ಚಿಂತಾಜನಕ ಚಿಕಿತ್ಸೆಗಾಗಿ ಆಸ್ಪತ್ರಗೆ ದಖಾಲು.

      ನಗರದ ಬೈಪಾಸ್ ಸಮೀಪ ಹಿಂದೂಸ್ಥಾನ್ ಪೇಟ್ರೋಲ್ ಬಂಕ್ ಮುಂಬಾಗದ ಕಿಲ್ಲರ್ ರಸ್ತೆ ಎಂದೆ ಖ್ಯಾತಿ ಪಡೆದಿರುವ ಹರಿಹರ- ಶಿವಮೊಗ್ಗ ರಸ್ತೆಯಲ್ಲಿ ಶನಿವಾರ ಮದ್ಯಾಹ್ನ ಸುಮಾರ 3 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.ಅಪಘಾತ ದಿಂದ ತೆಲೆಗೆ ತೀವ್ರ ತರವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಮೃತ ವ್ಯಕಿಯು ಕಮಲಾಪುರ ಗ್ರಾಮದ ರೈತ ಮಲ್ಲೇಶ್ (25) ತಂದೆ ಪರಮೇಶ್ವರಪ್ಪ ಎಂದು ಗುರುತಿಸಲಾಗಿದ್ದು ಈ ವ್ಯಕ್ತಿಯು ಹರಿಹರ ದಿಂದ ಸ್ವಗ್ರಾಮ ಕಮಲಾಪುರ ತೆರಳುತ್ತಿದ್ದ ಎನ್ನಲಾಗಿದೆ.

    ಇನ್ನೋರ್ವ ವ್ಯಕ್ತಿ ಹೊರ ರಾಜ್ಯದವನಾಗಿದ್ದು ವಿದ್ಯಾನಗರವಾಸಿಯಾದ ಅಲಿರಾಜ್ ಆನ್ಸಾರಿ ಎಂಬುವರು ನಗರದ ಹೊರ ಬಾಗದಲ್ಲಿರುವ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತದ್ದ ಎಂದು ತಿಳಿದು ಬಂದಿದೆ. ಈ ವ್ಯಕ್ತಿಯ ತೆಲೆಗೆ ಹಾಗೂ ಕೈ ಕಾಲುಗಳಿಗೆ ತೀವ್ರತರ ಗಾಯವಾಗಿದ್ದು ನಗರದ ಸಾರ್ವಜನಿಕ ಆಸ್ಪತ್ರೆಗೆ ದಖಾಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಗ್ರಾಮಾಂತರ ಪಿಎಸ್‍ಐ ಡಿ.ರವಿಕುಮಾರ್ ಬೇಟಿ ನೀಡಿ ಪರಿಶೀಲಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link