ಬೆಂಗಳೂರು
ಚೀನಾ ಸಂಜಾತ ಕೊರೋನಾ ವೈರಸ್ ತಡೆಗಟಲ್ಲು ಲಾಕ್ಡೌನ್ ಹೇರಿರುವುದರಿಂದ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಆಯಾ ರಾಜ್ಯಗಳು ಮತ್ತು ರೈಲ್ವೆ ಇಲಾಖೆ ವಿಶೇಷ ಶ್ರಮಿಕ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ರಾಜ್ಯ ಸರ್ಕಾರಗಳು ಕೂಡ ಕೇಂದ್ರದ ಆದೇಶದ ಮೇರೆಗೆ ತಮ್ಮಲ್ಲಿರುವ ವಲಸಿಗರನ್ನು ತವರಿಗೆ ವಿಶೇಷ ಶ್ರಮಿಕ್ ರೈಲಿನ ಮೂಲಕ ಕಳುಹಿಸುತ್ತಿದೆ.
ಇಂದು ಭಾನುವಾರ ರಾಜಧಾನಿಯಿಂದ ಉತ್ತರ ರಾಜ್ಯಗಳಿಗೆ ಎಂಟು ವಿಶೇಷ ಶ್ರಮಿಕ್ ರೈಲು ಹೊರಟಿವೆ. ಸೇವಾ ಸಿಂಧು ಪೋರ್ಟಲ್ ಮೂಲಕ ನೊಂದಾಯಿಸಿಕೊಂಡ 12 ಸಾವಿರ ಮಂದಿ ವಲಸಿಗರು ಲಗೇಜ್ ಸಮೇತ ತವರಿಗೆ ಈ ರೈಲುಗಳಲ್ಲಿ ಹೊರಟಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್‌ನಿಂದ 5, ಮೆಜೆಸ್ಟಿಕ್ನಿಂದ 1, ಚಿಕ್ಕಬಾಣಾವರದಿಂದ 2 ರೈಲು ಹೊರಟಿವೆ. ಬಿಹಾರದ ಮುಜಾಫರ್ ನಗರಕ್ಕೆ ಮಧ್ಯಾಹ್ನ 1ಕ್ಕೆ, ಇಲ್ಲಿನ ಕಟಿಹಾರ್‌ಗೆ ಮಧ್ಯಾಹ್ನ 3 ಗಂಟೆಗೆ, ದರ್ಭಂಗಾಗೆ ಸಂಜೆ 5 ಗಂಟೆಗೆ, ಬರೌನಿಗೆ ರಾತ್ರಿ 7 ಗಂಟೆಗೆ, ಅರಾರಿಯಾ ನಗರಕ್ಕೆ ರಾತ್ರಿ 10ಕ್ಕೆ ತಲಾ ಒಂದು ಟ್ರೈನ್ ಹೋಗುತ್ತಿದೆ. ಒಡಿಶಾದ ಭದ್ರಾಕ್‌ಗೆ ಸಂಜೆ 4ಕ್ಕೆ, ಉತ್ತರಪ್ರದೇಶದ ಅಜಮ್‌ಘರ್‌ಗೆ ಸಂಜೆ 4ಕ್ಕೆ, ಉ.ಪ್ರ ಬಸ್ತಿಗೆ ಸಂಜೆ 6ಕ್ಕೆ ಶ್ರಮಿಕ ರೈಲುಗಳು ಹೋಗಲು ಸಜ್ಜಾಗಿವೆ. ಪ್ರತಿ ರೈಲಿನಲ್ಲೂ ಸುಮಾರು 1500 ಪ್ರಯಾಣಿಕರು ತೆರಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ