ತುರುವೇಕೆರೆ:
ರಾಜ್ಯವ್ಯಾಪ್ತಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಲುವಾಗಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಭಾನುವಾರ ಒಂದು ದಿನ ಕರೆ ನೀಡಿರುವ ಜನತಾ ಕಫ್ರ್ಯೂಗೆ ತಾಲೂಕಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾನುವಾರ ಬೆಳಗಿನಿಂದಲೇ ರಸ್ತೆಯಲ್ಲಿ ಜನರ ಓಡಾಟ ತುಂಬಾ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಟೋ, ಲಾರಿ, ಕಾರುಗಳು, ರಾಜ್ಯ ರಸ್ತೆ ಸಾರಿಗೆ ಬಸ್ ಸೇರಿದಂತೆ ಇನ್ನಿತರ ವಾಹನಗಳ ಸಂಚಾರ ವಿರಳವಾಗಿತ್ತು. ಕೆಲವೇ ಬೈಕ್ ಓಡಾಟವಿದ್ದು ಚಾಲಕರು ಮಾಸ್ಕ್ ಧರಿಸಿ ಚಾಲನೆ ಮಾಡುತ್ತಿದ್ದುದು ಕಾಣಬಂತು. ಕೆಲ ಔಷಧಿ ಅಂಗಡಿಗಳು, ಹಾಲು, ಪೆಟ್ರೋಲ್ ಬಂಕ್, ಎಟಿಎಂಗಳು, ಕೋಳಿ ಅಂಗಡಿ, ಮಾಂಸದ ಅಂಗಡಿ ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ