ವಿಯಟ್ನಾಂ : 9ನೇ ಶತಮಾನದ ಬೃಹತ್ ಶಿವಲಿಂಗ ಪತ್ತೆ

ನವದೆಹಲಿ:

      ವಿಯೆಟ್ನಾಂನಲ್ಲಿ 9ನೇ ಶತಮಾನದ ಬೃಹತ್ ಶಿವಲಿಂಗ ಪತ್ತೆಯಾಗಿದ್ದು, ಉತ್ಖನನ ಕಾರ್ಯ ನಡೆಸಿದ್ದ ಭಾರತೀಯ ಪುರಾತತ್ವ ಇಲಾಖೆ ಕಾರ್ಯಕ್ಕೆ ಕೇಂದ್ರ ಸಚಿವ ಜೈ ಶಂಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

      ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದ ಮೈ ಸನ್‌ನಲ್ಲಿ ಚಾಮ್‌ ದೇಗುಲಗಳ ಪುನಾರಾಚನೆ ಕಾರ್ಯದಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಇತ್ತೀಚೆಗೆ ಬೃಹತ್‌ ಗಾತ್ರದ ಶಿವಲಿಂಗವೊಂದು ದೊರೆತಿದೆ. ಈ ವಿಚಾರವನ್ನು ಭಾರತೀಯ ವಿದೇಶಾಂಗ ಸಚಿವ ಎಸ್‌  ಜೈಶಂಕರ್‌ ಅವರು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

     ‘ವಿಯೆಟ್ನಾಂ‌ನ ಮೈ ಸನ್‌ನಲ್ಲಿ ಚಾಮ್‌ ದೇಗುಲಗಳ ಪುನಾರಚನೆಯಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಶಿವಲಿಂಗವೊಂದು ಸಿಕ್ಕಿದೆ. ಇದು ಎರಡೂ ದೇಶಗಳ ನಡುವಿನ ನಾಗರಿಕತೆ ನಂಟನ್ನು ಪುನರುಚ್ಚರಿಸುತ್ತಿದೆ. ಭಾರತದ ಅಭಿವೃದ್ಧಿ ಸಹಭಾಗಿತ್ವಕ್ಕೆ ಇದು  ಉತ್ತಮ ಸಾಂಸ್ಕೃತಿಕ ಉದಾಹರಣೆಯಾಗಿದೆ ಎಂದು  ಕೇಂದ್ರ ಸಚಿವ ಎಸ್ ಜೈಶಂಕರ್ ಟ್ವೀಟ್‌ ಮಾಡಿದ್ದಾರೆ. 

     ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿರುವ, ಚಾಮ್ ದೇವಾಲಯ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ. ಈ ಚಾಮ್ ದೇವಾಲಯವನ್ನು ಕ್ರಿ.ಶ 9ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರವರ್ಮ ನಿರ್ಮಿಸಿದ್ದ ಎನ್ನಲಾಗಿದೆ. ಅದೇ ಪ್ರದೇಶದಲ್ಲಿ ಪ್ರಸಿದ್ಧ ಡಾಂಗ್  ಡುವಾಂಗ್ ಬೌದ್ಧ ಕೇಂದ್ರ ನಿರ್ಮಾಣಕ್ಕೂ ಆತ ಕಾರಣನಾಗಿದ್ದ. ಭಾರತದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ, ಹಿಂದೂ ಧರ್ಮದ ಆರಾಧನೆಯಲ್ಲಿ ತೊಡಗಿದ್ದ ಚಂಪಾ ನಾಗರಿಕತೆ ಅಥವಾ ಚಾಮ್‌ ನಾಗರಿಕತೆಯು ಮಧ್ಯ ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೂ ಹಿಂದೆ ಉತ್ತುಂಗದಲ್ಲಿತ್ತು.  ಇಂದ್ರಪುರ ಎಂಬುದು ಅದರ ರಾಜಧಾನಿಯಾಗಿತ್ತು. ಚಾಮ್‌ ನಾಗರಿಕತೆ ಕಾಲದಲ್ಲೇ ವಿಯೆಟ್ನಾಂನ ಮೈ ಸನ್‌ ಪ್ರದೇಶದಲ್ಲಿ ಚಾಮ್‌ ದೇಗುಲ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ ಇತಿಹಾಸ ತಜ್ಞರು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link