ವಾಷಿಂಗ್ಟನ್
ವಿಶ್ವ ವಿಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ “ವೈಟಲ್ “ಹೆಸರಿನ ವಿಶೇಷ ವೆಂಟಿಲೇಟರ್ ತಯಾರಿಸಿ ಕೊವಿಡ್ 19 ರೋಗಿಗಳ ನೆರವಿಗೆ ಮುಂದಾಗಿದೆ.
ಈ ವೆಂಟಿಲೇಟರ್ ತಯಾರಿಕೆಗೆ ಮೂರು ಭಾರತೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಾಂಪ್ರದಾಯಿಕ ವೆಂಟಿಲೇಟರ್ಗೆ ಹೋಲಿಸಿದರೆ ವೈಟಲ್ ತಯಾರಿಕೆ ಹಾಗೂ ಬಳಕೆ ಸುಲಭವಾಗಿದೆ. ಹೈ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಹೋಟೆಲ್ಗಳು, ಕ್ವಾರಂಟೈನ್ ಕೇಂದ್ರಗಳು ಎಲ್ಲಿ ಬೇಕಾದರೂ ಇದನ್ನು ಬಳಸಬಹುದಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ಕ್ಷಿಪ್ರವಾಗಿ ತಯಾರಿಸಬಹುದಾಗಿದ್ದು, ಸಾಂಪ್ರದಾಯಿಕ ಉಪಕರಣಕ್ಕೆ ಹೋಲಿಸಿದರೆ ನಿರ್ವಹಣೆಯೂ ಅತ್ಯಂತ ಸುಲಭವಾಗಿದೆ.
ಸಾಮಾನ್ಯ ವೆಂಟಿಲೇಟರ್ ಮಾದರಿಯಂತೆಯೇ ರೋಗಿಗಳನ್ನು ಪ್ರಜ್ಞಾಹೀನಗೊಳಿಸಿ (ಸೆಡೆಷನ್), ಮೂಗಿನ ವಾಯುನಾಳಗಳ ಮೂಲಕ ಆಮ್ಲಜನಕವನ್ನು ಶ್ವಾಸಕೋಶಗಳಿಗೆ ಪೂರೈಸಲಾಗುತ್ತದೆ.
ತೀವ್ರ ಉಸಿರಾಟ ತೊಂದರೆ ಹೊಂದಿರುವ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದರಿಂದ ಹೆಚ್ಚು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾಸಾವು ಆಲ್ಫಾ ಡಿಸೈನ್ ಟೆಕ್ನಾಲಜೀಸ್, ಭಾರತ್ ಫೋರ್ಜ್, ಮೇಧಾ ಸರ್ವೋ ಡ್ರೈವ್ಸ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ