ನವದೆಹಲಿ :
ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿದ್ದು, ಗ್ರಾಹಕರಿಗೆ ಆತಂಕ ಸೃಷ್ಟಿಯಾಗಿದೆ.
ಹೊಸ ದರಗಳು ಜೂನ್ 1ರಿಂದಲೇ ಜಾರಿಗೆ ಬರಲಿದ್ದು, ಲಾಕ್‌ಡೌನ್ 5.0 ರ ಆರಂಭದಲ್ಲಿ ಸಾರ್ವಜನಿಕರಿಗೆ ದೊಡ್ಡ ಹಿನ್ನಡೆ ಉಂಟಾಗಿದ್ದು ಜೂನ್ ಮೊದಲ ದಿನವೇ ನಿಮ್ಮ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ.
ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 11.50 ರೂಪಾಯಿ ಹೆಚ್ಚಾಗಿದೆ. ಇತರ ನಗರಗಳಲ್ಲಿಯೂ ಸಹ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಈ ಮೊದಲು ಮೇ ತಿಂಗಳಲ್ಲಿ 162.50 ರೂಪಾಯಿವರೆಗೆ ಬೆಲೆ ಇಳಿಕೆಯಾಗಿತ್ತು. ಅದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆ 1139.50 ರೂಪಾಯಿಗೆ ಏರಿದೆ.
ಇನ್ನು, ಈ ಹೊಸ ದರಗಳು ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿ ಹೇಳಿದೆ. ಏಕೆಂದರೆ ಅವುಗಳು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಗೆ ಒಳಪಟ್ಟಿವೆ ಮತ್ತು ಜೂನ್ 30 ರವರೆಗೆ ಉಚಿತ ಸಿಲಿಂಡರ್‌ಗೆ ಅರ್ಹವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ