ಎಂ ಎನ್ ಕೋಟೆ ಒಂದು ಕಾಲಕ್ಕೆ ಬಾಳೆ ಬೆಳೆದವರ ಬಾಳು ಬಂಗಾರ ಎನ್ನುವಂತಿತ್ತು. ಆದರೆ ಕೊರೋನಾದಿಂದಾಗಿ ಬಾಳೆ ಮಾರಾಟ ಮಾಡಲು ಸಾಧ್ಯವಾಗದೆ ರೈತರು ಒದ್ದಾಡುವ ಪರಿಸ್ಥಿತಿ ಬಂದಿದೆ.
ಗುಬ್ಬಿ ತಾಲ್ಲೂಕಿನಲ್ಲಿ ಅಡಕೆ, ತೆಂಗು ಜತೆಯಲ್ಲಿ ಬಾಳೆ ಪ್ರಮುಖ ವಾಣಿಜ್ಯ ಬೆಳೆÉಯಾಗಿದೆ. ಹೇಮಾವತಿ ನಾಲೆಯ ಮೂಲಕ ನೀರು ಹರಿಯಲು ಆರಂಭವಾದ ನಂತರ ಅಡಕೆ ತೋಟದಲ್ಲಿ ಮೊದಲಿಗೆ ನೆರಳಿಗಾಗಿ ಬಾಳೆ ಬೆಳೆÉಯಲಾಗುತ್ತಿತ್ತು. ನಂತರ ಬಾಳೆಯನ್ನು ಮಿಶ್ರ ಬೆಳೆಯಾಗಿ ತಾಲ್ಲೂಕಿನ 6 ಹೋಬಳಿಗಳಲ್ಲಿ ಬೆಳೆಯಲಾಗಿದೆ.
ಗುಬ್ಬಿ ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ 1,278 ಹೆಕ್ವೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಅದರಲ್ಲಿ ಗುಬ್ಬಿ ಕಸಬಾ 285 ಹೆಕ್ವೇರ್, ನಿಟ್ಟೂರು 403, ಚೇಳೂರು 235, ಕಡಬ 149, ಸಿಎಸ್ ಪುರ 128, ಹಾಗಲವಾಡಿ 78 ಹೆಕ್ಟೇರ್‍ನಲ್ಲಿ ಬೆಳೆಯಲಾಗುತ್ತಿದೆ. ಬಹುತೇಕ ಬೆಂಗಳೂರು, ತುಮಕೂರು ಮಾರುಕಟ್ಟೆಗಳಿಗೆ ಗುಬ್ಬಿ ತಾಲ್ಲೂಕಿನಿಂದ ಬಾಳೆ ರವಾನೆಯಾಗುತ್ತಿದೆ. ತಾಲ್ಲೂಕಿನಲ್ಲಿ ಗುಬ್ಬಿ, ಚೇಳೂರು ಎಪಿಎಂಸಿಗಳಲ್ಲಿ ಬಾಳೆ ವ್ಯಾಪಾರ ಹೆಚ್ಚು ಕಂಡು ಬರುತ್ತಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಬಾಳೆ ದರ ಕುಸಿದಿದ್ದು ಪುಟ್ಟಬಾಳೆ ದರ 15-20 ರೂ.ಗೆ ಇಳಿದಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ಮದುವೆಗಳು, ಜಾತ್ರೆಗಳು, ದೇವಾಲಯಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯಬೇಕಿತ್ತು. ಆದರೆ ಕೊರೋನಾದಿಂದಾಗಿ ಬಾಳೆಯನ್ನು ಕೇಳುವವರೆ ಇಲ್ಲದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ