ನವದೆಹಲಿ:
ಜಾಗತಿಕವಾಗಿ ರೀಟೇಲ್ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ವಾಲ್ ಮಾರ್ಟ್ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್ಲೈನ್ ರಿಟೇಲ್ ಬಿಸಿನೆಸ್ ಫ್ಲಿಪ್ಕಾರ್ಟ್ ಭಾರತದಲ್ಲಿ ತನ್ನ ಪ್ರಸ್ತಾಪಿತ ಆಹಾರ ವಸ್ತು ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಡಿಪಿಐಐಟಿ ತಿರಸ್ಕರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತಾಪಿತ ಯೋಜನೆಯಲ್ಲಿ ನಿಯಂತ್ರಕ ವ್ಯವಸ್ಥೆಯ ಸಮಸ್ಯೆಯನ್ನು ಉಲ್ಲೇಖಿಸಿ ಫುಡ್ ರಿಟೇಲ್ ಕ್ಷೇತ್ರ ಪ್ರವೇಶಿಸುವ ಫ್ಲಿಪ್ಕಾರ್ಟ್ ಪ್ರಸ್ತಾವನೆಗೆ ಕೇಂದ್ರ ಅಸಮ್ಮತಿ ಸೂಚಿಸಿದೆ. ಕೇಂದ್ರ ಸರ್ಕಾರ ಫುಡ್ ರಿಟೇಲ್ನಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಇದೆ. ಹೀಗಾಗಿ ಕಳೆದ ವರ್ಷ ಫ್ಲಿಪ್ಕಾರ್ಟ್ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು.ಈ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯ ವಕ್ತಾರರು, ಫ್ಲಿಪ್ಕಾರ್ಟ್ ಅನುಮತಿಗಾಗಿ ಮತ್ತೆ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Untitled-1-1.gif)