ಎಂ ಎನ್ ಕೋಟೆ 
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ನೀರು ಹರಿದು ಬರುತ್ತಿದ್ದು ಇಲ್ಲಿನ ರಾಜ ಕಾಲುವೆಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿರುವ ಸರ್ಕಾರ ತಕ್ಷಣದಿಂದ ನಿಲ್ಲಿಸಬೇಕು ಎಂದು ರೈತ ಮುಖಂಡ ಹಾಗಲವಾಡಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುಬ್ಬಿ ತಾಲ್ಲೂಕಿನ ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿಗೆ ಅಡ್ಡಲಾಗಿ ಚೆಕ್ ಡ್ಯಾಂ ಹಾಗೂ ಅಣೆಕಟ್ಟುಗಳನ್ನು ತಕ್ಷಣ ನಿಲ್ಲಿಸುವಂತ ಉಪ ತಹಸೀಲ್ದಾರ್ ರವರಿಗೆ ಬುಧವಾರ ಮನವಿ ಸಲ್ಲ್ಲಿಸಿ ಮಾತನಾಡಿದರು. ಹಾಗಲವಾಡಿ ಹೇಮಾವತಿ ನೀರಿನಿಂದ ವಂಚಿತವಾಗಿದ್ದು, ಈ ಭಾಗದ ಜನರು ಕಳೆದ 20 ವರ್ಷಗಳಿಂದ ಬರದ ಬವಣೆ ಎದುರಿಸುತ್ತಿದ್ದಾರೆ.
ಚೆಕ್ ಡ್ಯಾಂ ನಿರ್ಮಾಣದಿಂದ ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರು ಸಹ ಬರದಿದ್ದರೆ ಈ ಭಾಗದ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ.ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಕೆನಾಲ್ ಕಾಮಾಗಾರಿ ಕುಂಟುತ್ತಾ ಸಾಗಿದ್ದು, ಯೋಜನೆ ಚುರುಕುಗೊಳಿಸಬೇಕಿದೆ ಅಲ್ಲಿಯವರೆಗೂ ದೊಡ್ಡಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗೆ ಚೆಕ್ ಡ್ಯಾಂ, ಬಂಡ್‍ಗಳನ್ನು ನಿರ್ಮಿಸುವ ಯೋಜನೆಯನ್ನು ಕೈ ಬಿಡಬೇಕು.
ಇಲ್ಲದಿದ್ದರೆ ಸುತ್ತಮುತ್ತಲಿನ 15 ಕ್ಕೂ ಹೆಚ್ಚು ಹಳ್ಳಿಗಳ ರೈತರು ಸಾರ್ವಜನಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಲವಾಡಿ ಕೆರೆಗೆ ಮಳೆಯಿಂದ ಮಾತ್ರ ನೀರು ಬರುತ್ತಿದ್ದು ಈ ನೀರಿನಿಂದಲೇ ಈ ಭಾಗದ ರೈತರು ಉಸಿರಾಡುತ್ತಿದ್ದಾರೆ. ಚೆಕ್ ಡ್ಯಾಂ ನಿರ್ಮಿಸುವುದನ್ನು ಕೈಬಿಡದೇ ಹೋದರೆ ಮುಂದಿನ ದಿನಗಳಲ್ಲಿ ರೈತರು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








