ಮಂಡ್ಯ:
ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ನಡೆದಿದೆ.
ಬೆಂಗಳೂರಿನ ಎವಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಪುರ ತಾಲೂಕಿನ ಮಲಿಯೂರು ಗ್ರಾಮದ ನಿವಾಸಿಗಳಾದ ಮಹೇಶ್ (30) ಹಾಗೂ ಮಾದೇಶ್ (23) ಮೃತ ದುರ್ದೈವಿಗಳು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆ ರವಾನಿಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ