ಶಿವಮೊಗ್ಗ : ಮಠಾಧೀಶರಿಗೆ ಕೊರೊನಾ ; ಮಠ ಸೀಲ್‌ ಡೌನ್!!

ಶಿವಮೊಗ್ಗ:

      ಜಿಲ್ಲೆಯ ಮಠಾಧೀಶರಲ್ಲಿ ಕೋವಿಡ್-19 ಸೋಂಕು ಕಂಡುಬಂದಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

       ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತನ್ನ ಜಾಲವನ್ನು ವಿಸ್ತರಿಸುತ್ತಿದ್ದು, ನಗರದ ಹೊರವಲಯದ ಸ್ವಾಮೀಜಿಯೊಂದರಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ. ಸದ್ಯ ಜಿಲ್ಲಾಡಳಿತವು ಸ್ವಾಮೀಜಿಯ ಟ್ರಾವೆಲ್ ಹಿಸ್ಟರಿ ಸಂಗ್ರಹಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಠದ ಆವರಣವನ್ನು ಸೀಲ್‌ ಡೌನ್ ಮಾಡಲಾಗಿದೆ.

      ಸದ್ಯ ಕೋವಿಡ್-19 ಸೋಂಕಿತ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಕೋವಿಡ್ -19 ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

     ಸ್ವಾಮೀಜಿಗೆ ಕೋವಿಡ್-19 ಸೋಂಕು ಸ್ವಾಮೀಜಿಗೆ ಹೇಗೆ ಕರೋನಾ ಕಾಣಿಸಿಕೊಂಡಿತು ಎನ್ನುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link