ಹೊಸದುರ್ಗ:
ನಿಸರ್ಗೋಪಾಸನೆ ದೇವೋಪಾಸನೆಗಿಂತ ಶ್ರೇಷ್ಠ ಎಂದು ಡಾ.ಶಾಂತವೀರ ಸ್ವಾಮೀಜಿ ಎಂದು ಹೇಳಿದರು.ಪಟ್ಟಣದ ಕುಂಚಿಟಿಗ ಮಠದ ವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ದೇವ ನಿರ್ಮಿತ ಪ್ರಕೃತಿಯನ್ನು ನಾಶ ಮಾಡಿ ಮನವ ನಿರ್ಮಿತ ವಸ್ತುಗಳಲ್ಲಿ ದೇವರನ್ನು ಹುಡುಕುತ್ತೀರುವುದು ವಿಪರ್ಯಾಸ. ಶಿಲಾಯುಗದಲ್ಲಿ ಮೂರ್ತಿ ಪೂಜೆ ಇರಲಿಲ್ಲ ಪ್ರಕೃತಿಯಲ್ಲಿ ಬದುಕಿ ಪ್ರಕೃತಿಯನ್ನು ದೇವರೆಂದು ನಂಬಿ ನಡೆದರು. ಕಲಿಯುಗದಲ್ಲಿ ಪ್ರಕೃತಿಯಲ್ಲಿ ವಿಕೃತಿ ಮಾಡುತ್ತಿರುವ ಕಾರಣ ವಿಶ್ವದಲ್ಲಿ ಶಾಂತಿ ಸಮಾಧಾನ ಇಲ್ಲದಂತಾಗಿದೆ ಎಂದು ಹೇಳಿದ ಅವರು ಕುಂಚಶ್ರೀ ವನದಲ್ಲಿ 300 ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗಿದೆ ಇನ್ನು 300 ಸಸಿ ನೆಡುವ ಯೋಜನೆ ಇದೆ ಎಂದರು.
ಚಿತ್ರದುರ್ಗದ ಮಾದರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಮಾತನಾಡಿ ನಗರದ ಸಾರ್ವಜನಿಕರಿಗೆ ಬೆಳಿಗ್ಗೆ ಸಂಜೆ ವಾಯು ವಿಹಾರಕ್ಕೆ ಉತ್ತಮ ಪರಿಸರ ಬೆಳೆಸುವ ಡಾ.ಶಾಂತವೀರ ಸ್ವಾಮೀಜಿಯವರ ಅಲೋಚನ ಅನೇಕರ ಆರೋಗ್ಯ ಸುಧಾರಿಸುವ ಕನಸಿನ ಲೋಕ ಕುಂಚಶ್ರೀ ವನ. ತಾವು ಕಾರ್ಯವನ್ನು ಅತ್ಯಂತ ಸಿಸ್ತಿನಿಂದ ತಾವೇ ನಿಂತು ಕಾಯಕ ಮಾಡುವ ನಿಜವಾದ ಕಾಯಕಯೋಗಿ ಡಾ.ಶ್ರೀಶಾಂತವೀರ ಸ್ವಾಮಿಜಿ ಅವರು ಪರಿಶ್ರಮ ಮತ್ತು ಪರಿಪಕ್ವ ಕೆಲಸಗಾರ ಎಂದು ಕೃಷಿಯಲ್ಲಿ ಸಾಬೀತು ಪಡಿಸಿರುವ ಕೃಷಿ ವೃಷಿ ಎಂದು ಅಭಿಮಾನದಿಂದ ಹೇಳಿದರು.
ಈ ವೇಳೆ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಉಪ್ಪಾರ ಸಮಾಜ ಭಗಿರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ.ಬಸವ ಮರಳುಸಿದ್ದ ಸ್ವಾಮೀಜಿ ಹಾಗೂ ಶ್ರೀಮಠದ ಭಕ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








