ಸೂಕ್ತ ಪರಿಹಾರವಿಲ್ಲದೆ ರಸ್ತೆ ಕಾಮಗಾರಿ : ರೈತರ ಬಂಧನ-ಬಿಡುಗಡೆ

ತಿಪಟೂರು

     ಅನ್ನದಾತರಿಗೆ ಕೊಡಬೇಕಾದ ಸೂಕ್ತ ಪರಿಹಾರವನ್ನು ನೀಡದೆ ಎನ್ ಎಚ್ 206 ರ ಬೈಪಾಸ್ ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದಕ್ಕಾಗಿ ರೈತರು ಮತ್ತು ಅಧಿಕಾರಗಳ ನಡುವೆ ವಾಗ್ವಾದವಾಗಿ, ಪ್ರತಿಭಟನಾ ನಿರತರನ್ನು ಬಂಧಿಸಿ ಬಿಡುಗಡೆಮಾಡಿದ ಘಟನೆ ಬುಧವಾರ ನಡೆದಿದೆ.ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಬಳಿಯ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಸೂಕ್ತ ಪರಿಹಾರ ನೀಡಿಲ್ಲ ಎಂದು ರೈತರು ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದರು.

       ತಿಪಟೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭದಿಂದಲೂ ಭೂ ಪರಿಹಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸತತ ಹೋರಾಟಗಳು ನಡೆದಿದ್ದು ಹಾಗೂ ನಡೆಯುತ್ತಿದ್ದೆ, ಆದರೆ ತಾಲ್ಲೂಕಿನ ಜನಪ್ರತಿನಿಧಿಗಳಂತು ದಿವ್ಯ ಮೌನಕ್ಕೆ ಜಾರಿರುವುದು ಅವರ ಮನೋಭಾವನೆಯನ್ನು ಪ್ರದರ್ಶಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ನಿರ್ಮಾಣಕ್ಕೆ ಜಿಲ್ಲಾಡಳಿತ ದೌರ್ಜನ್ಯದ ಮೂಲಕ ಹುಚ್ಚಗೊಂಡನಹಳ್ಳಿಯ ರೈತರ ಭೂಮಿ ಕಬಳಿಸಲು ಆರಕ್ಷರ ಬಲಪ್ರಯೋಗ ಮಾಡುತ್ತಿರುವುದು ಖಂಡನೀಯ.

      ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ನಿಜಕ್ಕೂ ಇದು ಸರ್ಕಾರದ ನೀಚಾತನದ ನಡೆ. ಜಿಲ್ಲಾಡಳಿತ ಪೊಲೀಸರನ್ನು ಬಳಸಿ ಏಕಾಏಕಿ ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟಿಸದಕ್ಕೆ ರೈತ ಮುಖಂಡರನ್ನು ಅರೆಸ್ಟ್ ಮಾಡಿರುವುದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೇ ಕಾನೂನು ಮಂತ್ರಿಗಳು ಆಗಿದ್ದರು ಕೂಡ ಜಿಲ್ಲೆಯ ರೈತರ ನ್ಯಾಯಸಮ್ಮತ ಕೂಗನ್ನು ಕಮ್ಮರಿಸುವು ಹುನ್ನಾರವೇಹೊರೆತು ಮತ್ತೇನೂ ಇಲ್ಲ.

     ಹುಚ್ಚಗೊಂಡನಹಳ್ಳಿ ರೈತ ನಂಜಾಮರಿ ಮಾತನಾಡಿ, ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡದೆ ಏಕಾಏಕಿ ಬೆಳೆಗಳಿರುವ ಜಮೀನಿನಲ್ಲಿ ಕಾಮಗಾರಿ ಮಾಡಿ ಬೆಳೆ ನಾಶ ಮಾಡಿದ್ದಾರೆ. ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ. ಪರಿಹಾರದ ಹಣ ನೀಡುವವರೆಗೆ ಕಾಮಗಾರಿ ಮಾಡಲು ಬಿಡುವುದಿಲ್ಲ, ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪರಿಹಾರದ ಹಣ ನೀಡುತ್ತಿದ್ದಾರೆ. ಕಾಮಗಾರಿಯಲ್ಲಿ ಮೋಸ ನಡೆದಿದ್ದು, ಯಾರೊಬ್ಬರೂ ಇದರ ಬಗ್ಗೆ ಮಾತನಾಡುವುದಿಲ್ಲ. ಲಾಭಿ ಮಾಡುವವರು ಹೆಚ್ಚಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಬಿ. ಆರತಿ, ಡಿವೈಎಸ್ಪಿ, ಚಂದನ್ ಕುಮಾರ್, ರೈತರ ಸಮಸ್ಯೆಯನ್ನು ಆಲಿಸಿದರು. ಪರಿಹಾರದ ಹಣ ಮಂಜೂರು ಆಗದಿದ್ದವರು ಭೂಸ್ವಾಧೀನಾಧಿಕಾರಿ ಕಚೇರಿಗೆ ದಾಖಲೆ ಸಮೇತ ತೆರಳಿದರೆ ಪರಿಹಾರ ಮಾಡಿಕೊಡುವುದಾಗಿ ತಿಳಿಸಿದರು.

ರೈತರ ಬಂಧನ- ಬಿಡುಗಡೆ:

      ಪ್ರತಿಭಟನಕಾರರಿಗೆ ಬೆಂಬಲ ನೀಡಿದ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ದೇವರಾಜು, ತಿಮ್ಲಾಪುರ ಚಂದನ್, ಸಿದ್ದಲಿಂಗಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap