ತುರುವೇಕೆರೆ
ಸಾಮಾಜಿಕ ಕಳಿಕಳಿಯುಳ್ಳ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಸೂತಕ ಚಿತ್ರದ ಮೂಲಕ ತೆರಮೇಲೆ ತರುವ ಪ್ರಯತ್ನವನ್ನು ಮಾಡಲಾಗುವುದೆಂದು ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್‍ಕುಮಾರ್ ತಿಳಿಸಿದರು.ತಾಲ್ಲೂಕಿನ ವಿವಿಧೆಡೆ ಸೂತಕ ಚಿತ್ರತಂಡ ಚಿತ್ರೀಕರಣ ನಡೆಸಲು ಯೋಗ್ಯವಾದ ಸ್ಥಳಗಳಿಗಾಗಿ ಸುತ್ತಾಡುವ ಸಂದರ್ಭದಲ್ಲಿ ಸಿದ್ದನಹಟ್ಟಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್‍ಕುಮಾರ್ ಮಾತನಾಡಿದರು.
ನಾನು ಸದಾ ಸಮಾಜದ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಚಿಂತಿಸುವ ವ್ಯಕ್ತಿ, ಸಾಧ್ಯವಾದಷ್ಟು ಸಮಾಜದಲ್ಲಿನ ಅನಿಷ್ಟ ಪದ್ದತಿಗಳಿಂದ ಆಗುತ್ತಿರುವ ಪರಿಣಾಮಗಳು ಹಾಗೂ ಅನಿಷ್ಟ ಪದ್ದತಿಗಳ ನಿರ್ಮೂಲನೆÀಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ಚಿತ್ರವನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಗ್ರಾಮೀಣ ಸೊಗಡಿನ ಚಿತ್ರವಾಗಿರುವುದರಿಂದ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಈಗಾಗಲೆ ಭೇಟಿ ನೀಡಿದ್ದು, ನಮ್ಮ ಚಿತ್ರಕ್ಕೆ ಸರಿ ಹೊಂದುವಂತಹ ಹಳ್ಳಿ ಪರಿಸರವನ್ನು ಹುಡುಕುವಂತಹ ಪ್ರಯತ್ನದಲ್ಲಿ ನಮ್ಮ ಚಿತ್ರತಂಡವಿದೆ ಎಂದರು.
ಚಿತ್ರದ ಸಹ ನಿರ್ಮಾಪಕರಾದ ವಿದ್ಯಾರಣ್ಯ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಚಿತ್ರೋದ್ಯಮದಲ್ಲಿ ಇದು ನನ್ನ ಮೊದಲ ಪ್ರಯತ್ನ. ಸಾಮಾಜಿಕ ಕಳಕಳಿಯುಳ್ಳ ಚಿತ್ರವಾದ್ದರಿಂದ ನಮ್ಮ ತಂಡ ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಗುರಿಯಿದೆ. ಕಲಾವಿದರ ಆಯ್ಕೆ ಕೂಡ ಅಂತಿಮ ಹಂತದಲ್ಲಿದ್ದು, ಒಂದು ಕೌಟುಂಬಿಕ, ಸಾಮಾಜಿಕ ಬದಲಾವಣೆ ತರುವ ಚಿತ್ರ ನಿರ್ಮಿಸುವ ಉದ್ದೇಶವಿದೆ ಎಂದರು.
ಈ ವೇಳೆ ಸ್ಥಳೀಯ ಮುಖಂಡರಾದ ಹಟ್ಟಿಹಳ್ಳಿ ಪುಟ್ಟಣ್ಣ, ತೋವಿನಕೆರೆ ಪಟೇಲ್, ಗೋಪಾಲಯ್ಯ ಸೇರಿದಂತೆ ಇತರರು ಚಿತ್ರತಂಡದ ಜೊತೆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ