ಸಮಾಜ ಕಲ್ಯಾಣ ಇಲಾಖೆ ತಲೆನೋವಾದ ಆ 50,000 ಜನ…!

ಬೆಂಗಳೂರು

    ರಾಜ್ಯದಾದ್ಯಂತ 800 ಕ್ಕೂ ವಸತಿ ಶಾಲೆಗಳು ಮತ್ತು ಹಾಸ್ಟೆಲ್‍ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ 50,000 ಕ್ಕೂ ಹೆಚ್ಚು ಜನರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಜನರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಇಲಾಖೆ, ಬೆಂಗಳೂರಿನ ಎಂಜಿ ರಸ್ತೆ ಮತ್ತು ಪ್ರಿಮ್ರೋಸ್ ರಸ್ತೆಯಲ್ಲಿರುವ ಕಟ್ಟಡಗಳ ಬೃಹತ್ ಸ್ಯಾನಿಟೈಸ್ ಕಾರ್ಯವನ್ನು ಆರಂಭಿಸಿದೆ. ಕಟ್ಟುನಿಟ್ಟಿನ ನೈರ್ಮಲ್ಯ ನಿಯಮಗಳಲ್ಲದೆ, ಪೆÇೀಷಕರ ಭೇಟಿಯನ್ನು ನಿರ್ಬಂಧಿಸುವ ಮಾರ್ಗಸೂಚಿಯನ್ನೂ ಸಹ ರೂಪಿಸಿದೆ.

     ಶಾಲೆಗಳು ಮತ್ತು ಕಾಲೇಜುಗಳನ್ನು ಆಗಸ್ಟ್‍ನಲ್ಲಿ ಪುನರಾರಂಭಗೊಳ್ಳುವ ಸಾಧ್ಯತೆ ಇರುವುದರಿಂದ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಶಾಲೆಗಳು ಮತ್ತು ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಬೇಕಾಗಿದೆ,.ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ರಾಜ್ಯಮಟ್ಟದ ಸಮಿತಿಯನ್ನು ರಚಿಸಿದ್ದೇವೆ. ಶಾಲೆಗಳು ಮತ್ತು ವಸತಿ ನಿಲಯಗಳನ್ನು ತೆರೆಯುವ ಮೊದಲು ಎಲ್ಲಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿರುವಂತೆ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ.? ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಸೋಮವಾರ ಹೇಳಿದ್ದಾರೆ.

      ಕ್ವಾರಂಟೈನ್ ಪೂರ್ಣಗೊಂಡ ನಂತರ ಎಲ್ಲಾ ಕಟ್ಟಡಗಳು, ಶೌಚಾಲಯಗಳು ಮತ್ತು ಅಡುಗೆಮನೆ ಸೇರಿದಂತೆ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು. ಇಲಾಖೆಯ ಕಟ್ಟಡಗಳಲ್ಲಿ ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಮಧ್ಯದಲ್ಲಿ ಅವರನ್ನು ಖಾಲಿ ಮಾಡಿಸಲು ಎಂದು ಇಲಾಖೆಯ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.ಇಲಾಖೆಯಿಂದ ಲಭ್ಯವಿರುವ ಮಾಹಿತಿಯಂತೆ ಈ ಕಟ್ಟಡಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ರಾಜ್ಯಾದ್ಯಂತ ವಸತಿ ಶಾಲೆಗಳಲ್ಲಿ 22,000 ಜನರನ್ನು ಹಾಗೂ ವಸತಿ ನಿಲಯಗಳಲ್ಲಿ 20,000 ಜನರನ್ನು ಸಂಪರ್ಕತಡೆಯಲ್ಲಿರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link