ತಿಪಟೂರು :
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ತಿಪಟೂರು-ಹಾಲ್ಕುರಿಕೆ ಮಾರ್ಗವಾಗಿ ಬಳ್ಳಾರಿ ಚಿತ್ರದುರ್ಗ ಮತ್ತಿರ ಜಿಲ್ಲೆ ಮತ್ತು ಅಂತರರಾಜ್ಯ ರಸ್ತೆಯಾದ ರಸ್ತೆಯ ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರಿಗೆ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ರಸ್ತೆ ಕಾಮಗಾರಿ ಸೂಕ್ತವಾಗಿ ಆಗದೇ ಮತ್ತೆ ಎಲ್ಲಿ ರಸ್ತೆಯು ಹಾಳಾಗುತ್ತದೆ ಎಂದು ಸ್ಥಳೀಯರ ಚಿಂತೆಗೆ ಕಾರಣವಾಗಿದೆ.
ನಗರದ ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾಗುವು ಹಿರಿಯುರು, ಚಿತ್ರದುರ್ಗ, ಬಳ್ಳಾರಿ ಮುಂತಾದ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿ 73 ಆಗಿ ಪರಿವರ್ತನೆಗೊಂಡು ವಿಸತರಣೆ ಕಾರ್ಯದ ಜೊತೆಗೆ ರಸ್ತೆಯನ್ನು ಉನ್ನತೀಕರಿಸಲಾಗುತ್ತದೆ. ಆದರೆ ಈ ಉನ್ನತೀಕರಿಸುವ ಭರದಲ್ಲಿ ರಸ್ತೆ ಪಕ್ಕದಲ್ಲಿ ಇದ್ದ ಕೆಲವು ವಿದ್ಯುತ್ ಕಂಬಗಳನ್ನು ತೆಗೆದು ಪಕ್ಕಕ್ಕೆ ಹಾಕಿದ್ದು ಇನ್ನೊಂದೆರಡು ಹಾಗೆಯೇ ಇದ್ದರು ರಸ್ತೆಕಾಮಗಾರಿಯನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ.
ಇನ್ನು ಇದೇ ರಸ್ತೆಯ ಮದ್ಯಭಾಗದಲ್ಲೇ ನಗರದ ಒಳಚರಂಡಿ ಮ್ಯಾನ್ಗಳಿದ್ದು ಗುತ್ತಿಗೆದಾರ ತನ್ನ ಕೆಲಸವಾದರೆ ಸಾಕೆಂದು ಅದರ ಮೇಲೆಯೇ ಸುಮಾರು 1 ರಿಂದ 2 ಅಡಿಯಷ್ಟು ದಪ್ಪವಾದ ಉತ್ತಮ ರಸ್ತೆಯನ್ನೇನು ಮಾಡುತ್ತಿದ್ದಾರೆ ಆದರೆ ಈ ಮ್ಯಾನ್ಹೋಲ್ಗಳು ಏನಾದರು ಕಟ್ಟಿಕೊಂಡರೆ ಇಲ್ಲಾ ಸ್ಥಳಿಯರು ಯಾರಾದರು ಒಳಚರಂಡಿ ಸಂಪರ್ಕಕಲ್ಪಸಲು ಹೋದರೆ ರಸ್ತೆಯನ್ನು ಮತ್ತೆ ಒಡೆಯಬೇಕಾಗುತ್ತದೆ. ಹೀಗೆ ಹೊಡೆಯುವುದರಿಂದ ರಸ್ತೆಯು ಸಂಪೂರ್ಣವಾಗಿ ಹಾಳಾಗುತ್ತದೆ.
ರಸ್ತೆ ಕಾಮಾಗಾರಿ ನಡೆಯುತ್ತಿದ್ದರು ತಲೆಹಾಕದ ನಗರಸಭೆ ಅಧಿಕಾರಿಗಳು : ಇನ್ನು ಒಳಚರಂಡಿ ಒಂದೇ ಅಲ್ಲ ಇದೇ ರಸ್ತೆಯ ಕೆಳಭಾಗದಲ್ಲಿ ಕುಡಿಯುವ ನೀರನ್ನು ಪೂರೈಸುವ ಕೊಳವೆಗಳು ಇರುವುದರಿಂದ ಇವು ಪದೇ ಪದೆ ಹೊಡೆದು ಹೋಗುತ್ತಿದ್ದರು, ಮತ್ತು ಅಲ್ಲಿಯೇ ಅನೇಕ ಜಂಕ್ಷನ್ ಮತ್ತು ಗೇಟ್ವಾಲ್ಗಳು ರಸ್ತೆಯಲ್ಲೇ ಹೂತು ಹೋಗುವ ಸಂಭವಿದೆ. ರಸ್ತೆಯಲ್ಲಿ ಈಗಾಗಲೇ ನೀರನ ಪೈಪ್ಗಳು ಹೊಡೆದು ವಾಟರ್ಮ್ಯಾನ್ಗಳೂ ಅವುಗಳಿಗೆ ತಾತ್ಕಾಲಿಕವಾಗಿ ತೇಪೆಹಾಕುವ ಕೆಲಸವನ್ನು ಮಾಡುತ್ತಿದ್ದರೂ ಸಹ ಹಲವಾರು ವಾಹನಗಳೂ ರಸ್ತೆಯಲ್ಲಿ ಊತುಹೋಗುತ್ತಿವೆ.
ಇದರ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ತಿಳಿಸಿದರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಮತ್ತು ನಗರಕ್ಕೆ ಬಂದು 3 ತಿಂಗಳು ಕಳೆದರು ಸಮಸ್ಯೆ ಮತ್ತು ವಿಳಾಸವನ್ನು ತಿಳಿಸಿದರೆ ಲೋಕೇಷನ್ ಕಳುಹಿಸಿ ಎಂದು ಹೇಳುವುದನ್ನು ನೋಡಿದರೆ ಪೌರಾಯುಕ್ತರು ಸರಿಯಾಗಿ ನಗರವನ್ನು ವೀಕ್ಷಣೆಯನ್ನೇ ಮಾಡಿಲ್ಲದೇ ಇರವುದು ಸ್ಪಷ್ಟವಾಗುತ್ತದೆ. ಈ ರೀತಿಯ ಪೌರಾಯುಕ್ತರಿಂದ ನಗರದ ಅಭಿವೃದ್ಧಿತಾನೆ ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗುತ್ತಿದೆ.
ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆಕಾಮಗಾರಿಯನ್ನು ವೀಕ್ಷಿಸಿ ರಸ್ತೆಯನ್ನು ಮಾಡುವಾಗ ಕುಡಿಯುವ ನೀರಿನ ಪೈಪ್ ಮತ್ತು ಯು.ಜಿ.ಡಿಯ ಮ್ಯಾನ್ಹೋಲ್ಗಳನ್ನು ಎತ್ತರಿಸಿ ರಸ್ತೆಯನ್ನು ಮಾಡಿದರೆ ನಾಗರೀಕರ ತೆರಿಗೆ ಹಣವು ಸದ್ವಿನಿಯೋಗವಾಗುವುದರೊಂದಿಗೆ ಉತ್ತಮ ರಸ್ತೆಯು ಹಲವಾರು ವರ್ಷಗಳ ಕಾಲಬಾಳಿಕೆಬರುವಂತಾಗುತ್ತದೆ ಎಂದು ಸ್ಥಳೀಯರ ಒತ್ತಾಸೆಯಾಗಿದೆ.
ವಿಶೇಷ ವರದಿ: ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ