ನವದೆಹಲಿ :
ಎಲ್ ಎ ಸಿಯ ಗಾಲ್ವಾನ್ ಕಣಿವೆಯ ಮೇಲೆ ಚೀನಾದ ಸಾರ್ವಭೌಮತ್ವವನ್ನು ತಾವು ಹೊಂಧಿರುವುದಾಗಿ ಹೇಳಿದ ಚೀನಾ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ .
ಈಶಾನ್ಯ ಲಡಾಖ್ ನಲ್ಲಿ ಭಾರತೀಯ ಸೇನೆ-ಚೀನಾ ಸೇನೆ ನಡುವೆ ನಡೆದ ಸಂಘರ್ಷದ ಬಳಿಕ ಚೀನಾ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಪ್ರತಿಪಾದನೆಯ ಮಾತುಗಳನ್ನಾಡಿತ್ತು. ಆದರೆ ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಚೀನಾದ ಪ್ರತಿಪಾದನೆ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿದೆ.
ಚೀನಾದ ಪ್ರತಿಪಾದನೆ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಘ್ ಶ್ರೀವಾಸ್ತವ, ಗಲ್ವಾನ್ ಮೇಲಿನ ಹಕ್ಕು ಪ್ರತಿಪಾದನೆ ಅದರದ್ದೇ ಈ ಹಿಂದಿನ ನಿಲುವುಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ. ಗಲ್ವಾನ್ ಕಣಿವೆಗೆ ಸಂಬಂಧಿಸಿದ ನಿಲುವು ಐತಿಹಾಸಿಕವಾಗಿ ಸ್ಪಷ್ಟವಾಗಿದೆ ಎಂದು ಅನುರಾಗ್ ಶ್ರೀವಾಸ್ತವ ಸ್ಪಷ್ಟಪಡಿಸಿದ್ದಾರೆ.
ಭಾರತ-ಚೀನಾದ ಪಶ್ಚಿಮ ಸೆಕ್ಟರ್ ಪ್ರದೇಶಗಳಲ್ಲಿ ಎಲ್ಎಸಿ ಹಾಗೂ ಇನ್ನಿತರ ಭಾಗಗಳನ್ನು ಅತಿಕ್ರಮಿಸುವ ಚೀನಾದ ಯತ್ನಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ