ನ್ಯೂ ಮೆಕ್ಸಿಕೋ : ಇಂಡಿಯಾ ಪ್ಯಾಲೆಸ್ ಹೋಟೆಲ್ ದ್ವಂಸ

ವಾಷಿಂಗ್ಟನ್​:

   ನ್ಯೂ ಮೆಕ್ಸಿಕೋದಲ್ಲಿನ ಭಾರತೀಯ ಮೂಲದವರ ರೆಸ್ಟೋರೆಂಟ್​ವೊಂದನ್ನು ಧ್ವಂಸ ಮಾಡಲಾಗಿದ್ದು ಅದರ ಅವಶೇಷಗಳ ಮೇಲೆ ದ್ವೇಷ ಸಾರುವ ಸಂದೇಶಗಳನ್ನು ಬರೆಯಲಾಗಿದೆ.ಸೇಂಟ್​ ಫೆ ಸಿಟಿಯಲ್ಲಿರುವ ಇಂಡಿಯಾ ಪ್ಯಾಲೇಸ್​ ಎಂಬ ರೆಸ್ಟೋರೆಂಟ್​ನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ಇದರಿಂದ ಮಾಲೀಕರಿಗೆ ಸುಮಾರು 1,00,000 ಡಾಲರ್​​ಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.

    ರೆಸ್ಟೋರೆಂಟ್ ಧ್ವಂಸ ಮಾಡಿದ ದುಷ್ಕರ್ಮಿಕಗಳ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್​ಎಎಲ್​ಡಿಇಎಪ್​​​ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ. ತಮ್ಮ ರೆಸ್ಟೋರೆಂಟ್​​ನಲ್ಲಿ ಏನು ನಡೆಯಿತು ಎಂಬುದನ್ನು ಅದರ ಮಾಲೀಕ ಬಲ್​ಜಿತ್​ ಸಿಂಗ್​ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್​​ನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಿಖ್​ ಅಮೆರಿಕನ್​ ಆಗಿರುವ ಲಖ್​ವಂತ್​ ಸಿಂಗ್​ ಎಂಬುವರ ಮೇಲೆ ತೀವ್ರ ಹಲ್ಲೆಯಾಗಿತ್ತು. ಎರಿಕ್​ ಬ್ರೀಮಾನ್​ ಎಂಬಾತ ಅವರಿಗೆ ಥಳಿಸಿದ್ದ. ನೀನು ನಿನ್ನ ದೇಶಕ್ಕೆ ವಾಪಸ್​ ಹೋಗು ಎಂದು ನಿಂದಿಸಿದ್ದ ಎಂಬುದಾಗಿ ಎಸ್​ಎಎಲ್​ಡಿಇಎಫ್​ ಆರೋಪಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link