ಮಿಜೋರಾಂ:
ಮಿಜೋರಾಂನಲ್ಲಿ ಕಳೆದ 48 ಗಂಟೆಗಳಲ್ಲಿ ಮೂರನೇ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದೆ.ಕಳೆದ ಎರಡು ದಿನ ಎರಡು ಭೂಕಂಪಗಳು ಸಂಭವಿಸಿದೆ ಒಂದು 5.5 ತೀವ್ರತೆಯ ಭೂಕಂಪವಾಗಿದ್ದರೆ ಮಂಗಳವಾರ ಸಂಭವಿಸಿದ ಭೂಕಂಪದ ತೀವ್ರತೆ 3.7 ದಾಖಲಾಗಿತ್ತು.
ಇದೀಗ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಛಾಂಪಾಯ್‌ನಿಂದ 31 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಮಿಜೋರಾಂನಲ್ಲಿ ಬೆಳಗ್ಗೆ 8.02 ನಿಮಿಷಕ್ಕೆ ಭೂಕಂಪ ಸಂಭವಿಸಿದೆ.ಕಳೆದ ಎರಡು ದಿನಗಳಲ್ಲಿ 3 ಭೂಕಂಪಗಳನ್ನು ಮಿಜೋರಾಂ ಕಂಡಿದೆ. ಕೊರೊನಾ ವೈರಸ್ ಹಾವಳಿ ನಡುವೆ ಮಿಜೋರಾಂ ಭೂಕಂಪದಿಂದಾಗಿ ಆತಂಕಕ್ಕೀಡಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








