ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ್ ಭೇಟಿ

ತುರುವೇಕೆರೆ

      ಕೊರೊನಾ ಭೀತಿಯ ನಡುವೆಯೂ ಗುರುವಾರ ತಾಲ್ಲೂಕಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಿರಾತಂಕವಾಗಿ ಬರೆದರು.

     ತಾಲ್ಲೂಕಿನ ನಾಲ್ಕು ಹೋಬಳಿಗಳ 8 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನದ ಆಂಗ್ಲ ಭಾಷಾ ವಿಷಯವನ್ನು ಕೊರೊನಾ ಭಯವಿಲ್ಲದೆ ಬರೆದರು. ಥರ್ಮೋ ಸ್ಕ್ಯಾನಿಂಗ್, ಸ್ಯಾನಿಟೈಸ್ ಮಾಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಮಕ್ಕಳು ಸುರಕ್ಷತೆಯಿಂದ ಪರೀಕ್ಷೆ ಬರೆದರು. ಜ್ವರ ಸೇರಿದಂತೆ ಇನ್ನಿತರ ಸಮಸ್ಯೆಗಳ ಕಾರಣಗಳಿಂದ ಪ್ರತ್ಯೇಕ ಕೊಠಡಿಗಳಲ್ಲಿ ಯಾವ ಕೇಂದ್ರಗಳಲ್ಲಿಯೂ ಸಹ ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಲಿಲ್ಲ.

       ಹೊರ ಜಿಲ್ಲೆ, ತಾಲ್ಲೂಕುಗಳಿಂದ ಬಂದ 15 ವಿದ್ಯಾರ್ಥಿಗಳು ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ತಹಸೀಲ್ದಾರ್ ಆರ್. ನಯಿಂಉನ್ನೀಸಾ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಂಗ್ಲಭಾಷಾ ವಿಷಯವನ್ನು ಬರೆಯಲು 1865 ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದವು. ಅವುಗಳಲ್ಲಿ 1766 ಪರೀಕ್ಷೆಗೆ ಹಾಜರಾಗಿದ್ದು, ಇನ್ನು 89 ಮಕ್ಕಳು ಗೈರು ಹಾಜರಾಗಿದ್ದವು ಎಂದು ಬಿಇಓ ಸಿ.ರಂಗಧಾಮಯ್ಯ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link