ಹುಳಿಯಾರು:
ಹುಳಿಯಾರು ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಆಮೆ ಗತಿಯಿಂದ ನಡೆಯುತ್ತಿದ್ದು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತ್ತಾಗಿದೆ.
ರಸ್ತೆಯ ಹಿಕ್ಕೆಲಗಳಲ್ಲಿನ ಕಟ್ಟಡ ತೆರವಾಗದೆ ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಿಂತಿತ್ತು. ಸಚಿವರ ಸೂಚನೆ ಮೇರೆಗೆ ಕಟ್ಟಡದ ಮಾಲೀಕರು ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿ ಮಾಡಲು ಸಹಕರಿಸಿದರು.ಅದರಂತೆ ಹತ್ತನ್ನೆರಡು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಒಂದು ಜೆಸಿಬಿ ಚರಂಡಿ ಕಾಮಗಾರಿಗೂ ಮತ್ತೊಂದು ಜೆಸಿಬಿ ರಸ್ತೆ ಕಾಮಗಾರಿಗೂ ಮಣ್ಣು ತೆಗೆಯುತ್ತಿದೆ. ಹಾಗಾಗಿ ಕಾಮಗಾರಿ ಆಮೆಗತಿಯಿಂದ ನಡೆಯುತ್ತಿದ್ದು ಸಾರ್ವಜನಿಕರ ಸುಗಮ ಸಮಚಾರಕ್ಕೆ ತೊಡಕಾಗಿದೆ.
ಅಲ್ಲದೆ ಈ ಹಿಂದೆ ಮಾಡಿದ್ದ ಚರಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವುರಿಂದ ಪಾದಕಾರಿಗಳು ಬೀಳುವ, ವಾಹನಗಳು ಸಿಲುಕಿಕೊಳ್ಳು ಘಟನೆಗಳು ಆಗಾಗ ನಡೆಯುತ್ತಿವೆ. ಅಲ್ಲದೆ ರಾಮ ಗೋಪಾಲ್ ಸರ್ಕಲ್ ಬಳಿ ಕೊಳಚೆ ನೀರು ರಸ್ತೆಗೆ ಹರಿದು ಕಿರಿಕಿರಿ ಸೃಷ್ಠಿಸಿದೆ.ಹೀಗೆ ಕಾಮಗಾರಿ ವಿಳಂಬದಿಂದ ಆಗಿರುವ ತೊಂದರೆಯನ್ನು ತಪ್ಪಿಸಲು ತಕ್ಷಣ ಹೆಚ್ಚುವರಿ ಯಂತ್ರಗಳು ಮತ್ತು ಕಾರ್ಮಿಕರನ್ನು ಕರೆತಂದು ಬಹುಬೇಗ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ