ಚಿಕ್ಕನಾಯಕನಹಳ್ಳಿ
ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ನ ಮೂರನೇ ಪ್ರಕರಣ ವರದಿಯಾಗಿದೆ, ಪಟ್ಟಣದ ಹೊರ ವಲಯದ ಕಾಡೇನಹಳ್ಳಿಯ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಗಂಟಲು ದ್ರಾವಣ ಪರೀಕ್ಷೆಯಲ್ಲಿ ವಿಷಯ ದೃಢಪಟ್ಟಿದ್ದು, ಈ ವ್ಯಕ್ತಿ ಸದ್ಯಕ್ಕೆ ತಿಪಟೂರು ತಾಲೂಕಿನ ಕೋಟನಾಯಕನಹಳ್ಳಿಯಲ್ಲಿದ್ದು ಅಲ್ಲಿಂದಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಕಾಡೇನಹಳ್ಳಿಯಲ್ಲಿ ಆತನ ಮನೆ ಇದ್ದ ಬೀದಿಯನ್ನು ಸೀಲ್ಡೌನ್ ಮಾಡಲಾಗಿದ್ದು, ಇಡೀ ಕಾಡೇನಹಳ್ಳಿ ಗ್ರಾಮವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ, ಅಗ್ನಿ ಶಾಮಕ ಸಿಬ್ಬಂದಿ ಇಡೀ ಗ್ರಾಮವನ್ನು ಸ್ಯಾನಿಟೈಸ್ ಮಾಡಲಾಯಿತು, ಆತನ ಮನೆಯಲ್ಲಿದ್ದ ನಾಲ್ಕು ಜನರನ್ನು ಆಸ್ಪತ್ರೆಗೆ ಕರೆದೊಯ್ಯದಿದ್ದು ಅವರ ಗಂಟಲು ದ್ರಾವಣವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಹೊನ್ನೆಬಾಗಿ ಗ್ರಾ.ಪಂ. ಪಿ.ಡಿ.ಓ. ಕೋಕಿಲಾ ಪತ್ರಿಕೆಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ