ಹೊಸದುರ್ಗ:
ಕೊಲೆಯಾಗಿ ನಾಲ್ಕೇ ದಿನದೊಳಗೆ ನಮ್ಮ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ರಾಧಿಕಾ ಹೇಳಿದ್ದಾರೆ.
ಪಟ್ಟಣದ ದುರ್ಗಾಂಬಿಕ ಸಮುದಾಯಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಚೇಗೆ ತಾಲ್ಲೂಕಿನ ಎಂ.ಜಿ.ದಿಬ್ಬ ಗ್ರಾಮದ ವಾಸಿಯಾದ ಅಶೋಕ ಎಂಬುವವನ ಕೊಲೆ ಪ್ರಕರಣ ಸಂಬಂಧಿಸಿದಂತೆ ಕೊಲೆ ಆರೋಪಿ ಹೆಚ್.ದೇವರಾಜ ಇವನನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದೇವೆ ಎಂದರು.
ಆರೋಪಿ ಅದೇ ಗ್ರಾಮದ ಎಚ್.ದೇವರಾಜ ಎಂಬುವನನ್ನು ಬಂಧಿಸಿ ಆರೋಪಿಯ ಕಡೆಯಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮೋಟಾರ್ ಸೈಕಲ್ ವಾಹನ ಮತ್ತು ಕೊಲೆಯಾದ ಅಶೋಕನ ಬಾಬ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದರು. ಒಟ್ಟಾರೆ ಕೊಲೆಯಾದ ನಾಲ್ಕೇ ದಿನದಲ್ಲಿ ಪತ್ತೆ ಕಾರ್ಯವನ್ನು ಯಶಸ್ವಿಗೊಳಿಸಿದ ತನ್ನ ಸಿಬ್ಬಂದಿವರ್ಗದವರನ್ನು ಶ್ಲಾಘಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ