ಚಿತ್ರದುರ್ಗ:
ಅಕ್ರಮ ಗಣಿಗಾರಿಕೆಯ ಅಟ್ಟಹಾಸ ಚಿತ್ರದುರ್ಗದಲ್ಲಿ ಮಿತಿಮೀರಿದೆ. ಇಂಥದ್ದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕದೇ ಇರುವುದಕ್ಕೆ ಇಂದು ಅಕ್ರಮ ಕಲ್ಲು ಗಣಿಗಾರಿಕೆ ಇಬ್ಬರು ಮಕ್ಕಳನ್ನು ಬಲಿ ಪಡೆದುಕೊಂಡಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಪೆÇಲೀಸ್ ಠಾಣೆಯ ವ್ಯಾಪ್ತಿಯ ಕಸ್ತೂರು ಬಾ ಗೇಟ್ ನಲ್ಲಿರುವ ಸುಬ್ರಮಣಿ ಕ್ರಷರ್ ನ ಗುಂಡಿಯಲ್ಲಿ ದನಗಳಿಗೆ ನೀರು ಕುಡಿಸಲು ಹೋದಾಗ ಒಬ್ಬ ಬಾಲಕ ಕಾಲು ಜಾರಿ ಬಿದ್ದಿದ್ದಾನೆ. ನೀರಿಗೆ ಬಿದ್ದಿರುವುದನ್ನು ಗಮನಿಸಿದ ಇನ್ನೊಬ್ಬನು ಅವನನ್ನು ಬದುಕಿಸಲು ಹೋಗಿ ತಾನು ಬಲಿಯಾಗಿದ್ದಾನೆ. ದೊಡ್ಡಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮದ ಜಯಪ್ಪನ ಮಕ್ಕಳಾದ ಪವನ್ (12) ಮತ್ತು ನಂದನ್ (14) ಈ ಕಲ್ಲು ಗಣಿಗಾರಿಕೆಗೆ ಮೃತಪಟ್ಟ ಮಕ್ಕಳು ಇಬ್ಬರು ಮಕ್ಕಳ ಕಳೆದುಕೊಂಡ ಕುಟುಂಬದ ರೋಧನ ಅಕ್ಷರಶಃ ಮುಗಿಲುಮುಟ್ಟಿತ್ತು. ಸುತ್ತಮುತ್ತಲ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.ಬಂದಂತಹ ಪ್ರತಿಯೊಬ್ಬರೂ ಕೂಡ ಕಲ್ಲು ಗಣಿಗಾರಿಕೆಗೆ ಹಿಡಿಶಾಪ ಹಾಕುತ್ತಿದ್ದರು.
ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗಪ್ಪ, ಹೊಳಲ್ಕೆರೆಯ ಸಿಪಿಐ ರಮೇಶ್, ಚಿಕ್ಕಜಾಜೂರಿನ ಪಿಎಸ್‍ಐ ಮೋಹನ್ ಕುಮಾರ್, ಹೊಳಲ್ಕೆರೆಯ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ