ನವದೆಹಲಿ :
2019-20ನೇ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ನವೆಂಬರ್ 30ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ಈ ಕುರಿತಂತೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದ್ದು, “ದೇಶದಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಿಂದಾಗಿ ಐಟಿಆರ್ ಸಲ್ಲಿಸುವ ಕಾಲಾವಧಿಯನ್ನು ನವಂಬರ್ 30 ರವರೆಗೆ ವಿಸ್ತರಿಸಿದ್ದು, ಇದರಿಂದ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ” ಎಂದು ತಿಳಿಸಿದೆ.
Understanding & keeping in mind the times that we are in, we have further extended deadlines. Now, filing of ITR for FY 2019-20 is extended to 30th Nov, 2020. We do hope this helps you plan things better.#ITDateExtension#FacilitationDuringCovid#WeCare #IndiaFightsCorona pic.twitter.com/ZoGBpok3V7
— Income Tax India (@IncomeTaxIndia) July 4, 2020
ಸಣ್ಣ ಮತ್ತು ಮಧ್ಯಮ ತೆರಿಗೆ ಪಾವತಿದಾರರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿರುವ ಆದಾಯ ತೆರಿಗೆ ಇಲಾಖೆ ರೂ.1 ಲಕ್ಷವರೆಗೆ ತೆರಿಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಸೆಲ್ಫ್ ಅಸ್ಸೆಸ್ಮೆಂಟ್ ತೆರಿಗೆ ಪಾವತಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 30, 2020 ರವರೆಗೆ ವಿಸ್ತರಿಸಲಾಗಿದೆ.
ಕಳೆದ ಗುರುವಾರವಷ್ಟೇ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಪಾವತಿ ದಿನಾಂಕವನ್ನು ಜುಲೈ 31ರವೆರೆಗೆ ವಿಸ್ತರಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರು ಪ್ರಸಕ್ತ ಬಾರಿಯ ತೆರಿಗೆ ಪಾವತಿಗೆ ಜುಲೈ 31ರವರೆಗೆ ಕಾಲಾವಕಾಶವಿದೆ. ಇದರ ಬೆನ್ನಲ್ಲೇ ಪ್ರಸಕ್ತ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಕಡೇ ದಿನಾಂಕವನ್ನು ನವಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ